ಪ್ರತಿಭಟನಾ ನಿರತ ರಾಜಸ್ತಾನಿ ರೈತರು ಮತ್ತು ಪೋಲೀಸರ ನಡುವೆ ಸಂಘರ್ಷ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(14-12-2020): ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರಾಜಸ್ತಾನಿ ರೈತರು ಮತ್ತು ಪೋಲೀಸರ ನಡುವೆ ಸಂಘರ್ಷವುಂಟಾಗಿದ್ದು, ಹಲವು ರೈತರು ಬಂಧನಕ್ಕೊಳಗಾಗಿದ್ದಾರೆ. ದೆಹಲಿಗೆ ಸಾಗುವ ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಸಂಘರ್ಷ ನಡೆದಿದ್ದು, ಬಳಿಕ ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ರೈತರು ಧರಣಿಯನ್ನೂ ನಡೆಸಿದ್ದಾರೆ.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೈತರನ್ನು ತಮ್ಮ ವಶದಲ್ಲಿರಿಸಿದ ಪೋಲೀಸರಿಗೆ ಬಳಿಕ ಅವರನ್ನು ಬಿಡುಗಡೆಗೊಳಿಸಬೇಕಾಗಿ ಬಂತು. ಪ್ರತಿಭಟನೆಯನ್ನು ತೀವ್ರಗೊಳಿಸುವುದರ ಭಾಗವಾಗಿ ಆಗ್ರಾ ಎಕ್ಸ್ಪ್ರೆಸ್ ಮತ್ತು ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯ ಮೂಲಕ ದೆಹಲಿ ಗಡಿ ತಲುಪಿ, ರಸ್ತೆ ತಡೆ ನಡೆಸಲು ರೈತರು ಶನಿವಾರವೇ ತೀರ್ಮಾನಿಸಿದ್ದರು.

ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದು, ಇಂದಿಗೆ ಅದು ಹತ್ತೊಂಭತ್ತನೇ ದಿನವನ್ನು ಪೂರೈಸಿದೆ. ಹಲವು ಸುತ್ತಿನ ಮಾತುಕತೆಗಳ ಬಳಿಕವೂ ಸರಕಾರ ಮತ್ತು ರೈತರ ನಡುವೆ ಇನ್ನೂ ಒಮ್ಮತ ಮೂಡಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು