ಪ್ರಧಾನಿ ಮೋದಿ ಹಾಗೂ ಭಾರತಕ್ಕೆ ಧನ್ಯವಾದಗಳು: ಕ್ರಿಕೆಟಿಗ ‘ಕ್ರಿಸ್ ಗೇಲ್’

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಭಾರತದ ಪ್ರಧಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಭಾರತವು.ಜಮೈಕಾ ದೇಶಕ್ಕೆ ಕೊರೋನ ವೈರಸ್ ಲಸಿಕೆಗಳನ್ನು ದೇಣಿಗೆಯಾಗಿ ನೀಡಿದೆ. ಕೊರೋನಾ ಡೋಸ್ ಗಳನ್ನು ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ವಿಡಿಯೋ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಸಣ್ಣ ವಿಡಿಯೋ ಮೂಲಕ ಭಾರತ ದೇಶಕ್ಕೆ ಧನ್ಯವಾದ ತಿಳಿಸಿದ ಕ್ರಿಸ್ ಗೇಲ್ ಅವರ ವಿಡಿಯೋ ತುಣುಕು ವಿದೇಶಾಂಗ ಸಚಿವ ಎಸ್. ಜೈಶಂಕರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜಮೈಕಾಕ್ಕೆ ಕೊರೋನಾ ಲಸಿಕೆಗಳನ್ನು ದೇಣಿಗೆಯಾಗಿ ನೀಡಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತ ಸರಕಾರ ಹಾಗೂ ಭಾರತದ ಜನತೆಗೆ ನಾನು ಧನ್ಯವಾದ ಹೇಳಲು ಇಚ್ಚಿಸುವೆ. ಇದು ಶ್ಲಾಘನೀಯ ಕಾರ್ಯ, ನಿಮಗೆ ಋಣಿಯಾಗಿದ್ದೇವೆ ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.

ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಟದಲ್ಲಿ ಬೇರೆ ದೇಶಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಭಾರತದಲ್ಲೇ ಸಿದ್ದಪಡಿಸಿದ ಲಸಿಕೆಗಳನ್ನು ಈ ತಿಂಗಳ ಆರಂಭದಲ್ಲಿ ಭಾರತವು ವೆಸ್ಟ್ ಇಂಡೀಸ್ ಗೆ ಕಳುಹಿಸಿಕೊಟ್ಟಿತ್ತು. ಮಾರ್ಚ್ 9ರಂದು ಭಾರತದ ಲಸಿಕೆಗಳು ಕೆರಿಬಿಯನ್ ದೇಶಕ್ಕೆ ತಲುಪಿದೆ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು