ನವದೆಹಲಿ(17-10-2020): ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 94ನೇ ಸ್ಥಾನದಲ್ಲಿದ್ದು, ಜನಸಂಖ್ಯೆಯ ಶೇ.14ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬುವುದನ್ನು ಅಂಕಿ ಅಂಶವು ತೋರಿಸಿದೆ.
ಈ ಕುರಿತು ಕೇಂದ್ರ ಸರಕಾರವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಸರ್ಕಾರ ಕೆಲ ‘ವಿಶೇಷ’ ಸ್ನೇಹಿತರ ಜೇಬು ತುಂಬಿಸುವಲ್ಲಿ ನಿರತವಾಗಿದೆ. ಇದರಿಂದಾಗಿ ದೇಶದ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 94 ನೇ ಸ್ಥಾನದಲ್ಲಿದೆ. ಪಾಕಿಸ್ತಾನ(88) ಮತ್ತು ಬಾಂಗ್ಲಾದೇಶ (75) ಸ್ಥಾನಗಳಲ್ಲಿರುವ ಗ್ರಾಫಿಕ್ಸ್ ನ್ನು ರಾಹುಲ್ ಗಾಂಧಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸೂಚ್ಯಾಂಕದ ಪ್ರಕಾರ ಕೇವಲ 13 ದೇಶಗಳು ಮಾತ್ರ ಬಡತನದಲ್ಲಿ ಭಾರತದಿಂದ ಕೆಳಗಿವೆ. ಇದರಲ್ಲಿ ರವಾಂಡ, ನೈಜೀರಿಯಾ, ಅಫ್ಗಾನಿಸ್ತಾನ ಮತ್ತು ಲಿಬಿಯಾ ದೇಶ ಇದೆ.