ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಶಾಸಕಿ|  ಪ್ರಜ್ಞಾಹೀನ ಸ್ಥಿತಿಯಲ್ಲಿ ಐಸಿಯುನಲ್ಲಿ ಚಿಕಿತ್ಸೆ!

Poongothai Aladi
Share on facebook
Share on twitter
Share on linkedin
Share on whatsapp
Share on telegram
Share on email
Share on print

ತಿರುನೆಲ್ವೇಲಿ(20-11-2020): ಡಿಎಂಕೆ ಶಾಸಕಿ, ಮಾಜಿ ಸಚಿವೆ ಪೂಂಗೋಥೈ ಅಲ್ಲಾಡಿ ಅರುಣಾ ಅವರು “ನಿದ್ರೆ ಮಾತ್ರೆಗಳನ್ನು” ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮಿಳುನಾಡಿನ ಶಿಫಾ ಆಸ್ಪತ್ರೆಗೆ ಶಾಸಕಿಯನ್ನು ದಾಖಲಿಸಲಾಗಿದೆ. ಪ್ರಸ್ತುತ ಅವರಿಗೆ ಪ್ರಜ್ಞೆ ಬಂದಿದೆ. ಎಚ್ಚರವಾಗಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮೊಹಮ್ಮದ್ ಅರಾಫತ್ ಈ ಕುರಿತು ಮಾತನಾಡಿದ್ದು, ಪ್ರಸ್ತುತ ಶಾಸಕಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ವೈದ್ಯರ ತಂಡದಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ  ಡಿಎಂಕೆ ಸಭೆಯಲ್ಲಿ ಪಕ್ಷದೊಳಗಿನ ಜಗಳದ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು ಎಂಬ ಸುದ್ದಿಯನ್ನು ಆಧಾರರಹಿತ ವರದಿಗಳೆಂದು ತಳ್ಳಿಹಾಕಲಾಗಿದೆ.

ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಆರ್ ಎಸ್ ಭಾರತಿ ಈ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದಾರೆ. ನಮ್ಮ ಅಧ್ಯಕ್ಷರು (ಎಂ ಕೆ ಸ್ಟಾಲಿನ್) ನನ್ನನ್ನು ಭೇಟಿ ಮಾಡಲು ಕೇಳಿದ ನಂತರ ನಾನು ಇಂದು ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರು ಪ್ರಜ್ಞೆ ಹೊಂದಿದ್ದಾರೆ. ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಡಿಎಂಕೆ ಜಿಲ್ಲಾ ಪದಾಧಿಕಾರಿಗಳು ಸಹ ಅವರೊಂದಿಗೆ ಆಸ್ಪತ್ರೆಗೆ ತೆರಳಿದರು ಮತ್ತು ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಜಗಳಗಳಿಲ್ಲ ಎಂದು ಭಾರತಿ ಹೇಳಿದರು. ಆದರೆ, ಪಕ್ಷದ ಸಭೆಯ ಮಧ್ಯೆ ಕೆಲವು ಪಕ್ಷದ ಕಾರ್ಯಕರ್ತರ ಪಾದಗಳನ್ನು ಸ್ಪರ್ಶಿಸುವ ಪೂಂಗೋಥೈ ಅವರ ವಿಡಿಯೋ ತುಣುಕು, ಗಲಾಟೆ ಮಾಡುವುದನ್ನು ಸೂಚಿಸುತ್ತದೆ.ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು