ಹೊಸದೆಹಲಿ(05/11/2020): ಗೋವಾದ ಚಪೋಲಿ ಅಣೆಕಟ್ಟು ಪ್ರದೇಶಕ್ಕೆ ಯಾವುದೇ ಅನುಮತಿ ಇಲ್ಲದೇ ಪ್ರವೇಶಿಸಿ, ಅಶ್ಲೀಲ ವಿಡಿಯೊ ಚಿತ್ರೀಕರಿಸಿದ ಆರೋಪದಡಿ ನಟಿ ಪೂನಂ ಪಾಂಡೆ ಅವರನ್ನು ಗೋವಾ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.
ಪೂನಂ ಪಾಂಡೆಗೆ ಚಿತ್ರೀಕರಣ ಮಾಡಲು ಅವಕಾಶ ನೀಡಿ, ಅಧಿಕಾರವನ್ನು ದುರ್ಬಳಕೆ ಮಾಡಿದ ಆರೋಪದಡಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನೂ ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ದಕ್ಷಿಣ ಗೋವಾದ ಕನಕೋನ ಪಟ್ಟಣದ ಜನರು ನೀಡಿದ ದೂರು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.