ಪೋಲೀಸರು ಈಗಲಾದರೂ ಆರೋಪಿಯನ್ನು ಬಂಧಿಸಬೇಕು: ಸಿಡಿ ಯುವತಿ ಪರ ವಕೀಲ ಜಗದೀಶ್ ಆಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸಿಡಿ ಪ್ರಕರಣ ದಿನಕ್ಕೊಂದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದೆ. ಇಂದು ಇಡೀ ದಿನ ಸಿಡಿ ಯುವತಿಯ ವಿಚಾರಣೆಗೆ ಸಂಬಂಧಿಸಿದ ಬೆಳವಣಿಗೆಗಳು ನಡೆದವು. ಸಿಡಿ ಲೇಡಿ ಇರುವ ಸ್ಥಳಕ್ಕೆ ಭೇಟಿ ನೀಡಿದ ಎಸ್ಐಟಿ ತಂಡ, ಯುವತಿಯನ್ನು ಭಾರೀ ಬಿಗಿ ಭದ್ರತೆಯೊಂದಿಗೆ ಆಡುಗೋಡಿ SIT ಸೆಲ್‌ಗೆ ಕರೆದುಕೊಂಡು ಹೋಗಿದ್ದರು.

ಸೆಕ್ಸ್‌ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ಸ್ಥಳದಲ್ಲಿ ನ್ಯಾಯಾಧೀಶರೆದುರು ಸಿಡಿ ಯುವತಿ ತನ್ನ ಹೇಳಿಕೆಯನ್ನ ದಾಖಲಿಸುತ್ತಿದ್ದಂತೆ, ಸಿಡಿಲೇಡಿಯನ್ನು ಭಾರೀ ಬಿಗಿ ಭದ್ರತೆಯೊಂದಿಗೆ ಎಸ್‌ಐಟಿ ಅಧಿಕಾರಿಗಳು ಆಡುಗೋಡಿಯಲ್ಲಿರುವ ಟೆಕ್ನಿಕಲ್‌ ಸೆಲ್‌ಗೆ ಕರೆದೊಯ್ದಿದ್ದಾರೆ.

ನಾವು ಮಾತು ಕೊಟ್ಟಂತೆ ಸಿಡಿ ಕೇಸ್ ಗೆ ಸಂಬಂಧಿಸಿದ ಯುವತಿಗೆ ಕೋರ್ಟ್ ಗೆ ಹಾಜರುಪಡಿಸಿದ್ದೇವೆ. ಆಕೆಯ ಸ್ವ-ಇಚ್ಛೆ ಹೇಳಿಕೆಯನ್ನು ದಾಖಲಿಸಿದ್ದಾಳೆ. ಎಸ್ಐಟಿ ಪೊಲೀಸರು ಈಗಲಾದರೂ ಸಂಬಂಧ ಪಟ್ಟ ಆರೋಪಿಯನ್ನು ಬಂಧಿಸಬೇಕು ಎಂದು ಸಿಡಿ ಯುವತಿ ಪರ ವಕೀಲ ಜಗದೀಶ್ ಅವರು ಹೇಳಿದ್ದಾರೆ.

ಸಿಡಿ ಲೇಡಿ ಇನ್ನೂ ಭಾರೀ ಬಂದೋಬಸ್ತ್ ನೊಂದಿಗೆ ಎಸ್ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾಳೆ. ವಿಚಾರಣೆಯ ನಂತರ ಸಿಡಿ ಯುವತಿಗೆ ಮೆಡಿಕಲ್ ಟೆಸ್ಟ್ ಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು