ಮಧ್ಯಪ್ರದೇಶ(20-11-2020): ಗಾಯಗೊಂಡ ಮಹಿಳೆಯನ್ನು ಬೆನ್ನಿನ ಮೇಲೆ ಆಸ್ಪತ್ರೆಯೊಳಗೆ ಹೊತ್ತುಕೊಂಡು ಹೋಗುವ ಮಧ್ಯಪ್ರದೇಶದ ಜಬಲ್ಪುರದ ಪೊಲೀಸರ ವಿಡಿಯೋ ಹಲವಾರು ಜನರ ಹೃದಯಗಳನ್ನು ಗೆದ್ದಿದೆ.
ಮಿನಿ ಟ್ರಕ್ ಪಲ್ಟಿಯಾಗಿ ಸುಮಾರು 35 ಕಾರ್ಮಿಕರು ಗಾಯಗೊಂಡಿದ್ದರು. ಪೊಲೀಸ್ ತಂಡ ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತಲುಪಿದ ನಂತರ, ಗಾಯಗೊಂಡ ಜನರನ್ನು ಆಸ್ಪತ್ರೆಯೊಳಗೆ ಕರೆದೊಯ್ಯಲು ಸ್ಟ್ರೆಚರ್ಗಳು ಲಭ್ಯವಿಲ್ಲ ಎಂದು ಪೊಲೀಸರು ಅರಿತುಕೊಂಡರು.
ಈ ವೇಳೆ ಯಾವುದೇ ಸಮಯವನ್ನು ವ್ಯರ್ಥ ಮಾಡದೆ, ಪೊಲೀಸರು ಅವರನ್ನು ಆಸ್ಪತ್ರೆಯೊಳಗೆ ಸಾಗಿಸಲು ನಿರ್ಧರಿಸಿದರು. ಸಹಾಯಕ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಸೇನ್, ಎಲ್.ಆರ್. ಪಟೇಲ್ ಮತ್ತು ಕಾನ್ಸ್ಟೆಬಲ್ಗಳಾದ ಅಂಕಿತ್, ಅಶೋಕ್, ಮತ್ತು ರಾಜೇಶ್ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಬೆನ್ನಿನ ಮೇಲೆ ಎತ್ತಿ ಅಪಘಾತ ವಿಭಾಗಕ್ಕೆ ಕರೆದೊಯ್ದರು.
ಅಂತರ್ಜಾಲದಲ್ಲಿ ಸುತ್ತಾಡುತ್ತಿರುವ ವೀಡಿಯೊದಲ್ಲಿ, ವಯಸ್ಸಾದ ಮಹಿಳೆಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಆಸ್ಪತ್ರೆಯೊಳಗೆ ಕರೆದೊಯ್ಯುವುದನ್ನು ಕಾಣಬಹುದು ಪೊಲೀಸರ ಈ ಮಾನವೀಯತೆಯ ವಿಡಿಯೋ ಜನರ ಮನಸ್ಸನ್ನು ಗೆದ್ದಿದೆ.