ಲಕ್ನೋ(01-03-2021): ಉತ್ತರ ಪ್ರದೇಶದಲ್ಲಿ ರೈಲಿನಲ್ಲಿ ಟಿಕೆಟ್ ಇಲ್ಲದೆ 20 ಪೊಲೀಸರು ಪ್ರಯಾಣಿಸಿ ಟಿಕೆಟ್ ಪರೀಕ್ಷಕನ ಕೈಗೆ ಸಿಕ್ಕಿಬಿದ್ದಿದ್ದಾರೆ.
ದೆಹಲಿಯಿಂದ ಬಿಹಾರದ ರಾಜ್ಗಿರ್ಗೆ ತೆರಳುತ್ತಿದ್ದ ಶ್ರಮಜೀವಿ ಎಕ್ಸ್ಪ್ರೆಸ್ ರೈಲಿನಲ್ಲಿ ಪೊಲೀಸರು ಟಿಕೆಟ್ ತೆಗೆದುಕೊಳ್ಳದೆ ಸಂಚರಿಸಿ ಸಿಕ್ಕಿಬಿದ್ದಿದ್ದಾರೆ.
ಪೊಲೀಸರ ಕಳ್ಳತನದ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋವನ್ನು ಸಹಪ್ರಯಾಣಿಕರು ಚಿತ್ರಿಸಿರುವ ಸಾಧ್ಯತೆ ಇದೆ. ವಿಡಿಯೋದಲ್ಲಿ ಟಿಕೆಟ್ ಇಲ್ಲದೆ ಸಂಚರಿಸಿದ ಪೊಲೀಸರನ್ನು ಟಿಟಿಇ ಹಿಡಿದಾಗ ಓರ್ವ ಪೊಲೀಸ್ ಯುನಿಫಾರ್ಮ್ ತೋರಿಸಿದ್ದಾನೆ. ಮತ್ತೋರ್ವ ಕೇಸ್ ಹಾಕಿದ್ರೆ ಜೀವನ ಪೂರ್ತಿ ನನ್ನನ್ನು ನೆನಪಿಸುವಂತಾಗುತ್ತದೆ ಎಂದು ಹೇಳಿದ್ದಾನೆ. ಮತ್ತೋರ್ವ ದಂಡ ಪಾವತಿಯಿಂದ ನಿವೇನೂ ಮಿನಿಸ್ಟರ್ ಆಗುವುದಿಲ್ಲ ಎಂದು ಟಿಟಿಇಗೆ ತಮಾಷೆ ಮಾಡಿದ್ದಾನೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುಪಿ ಪೊಲೀಸರ ದುರ್ವತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.