ಹೈದರಾಬಾದ್(03-11- 2020): ಹೈದರಾಬಾದ್ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿ, ಅವರಿಂದ 1 ಕೋಟಿ ರೂ.ನಗದು ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ದುಬ್ಬಕಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುನಂದನ್ ರಾವ್ ಅವರ ಸೋದರಳಿಯ ಸುರಭಿ ಶ್ರೀನಿವಾಸ್ ರಾವ್ ಮತ್ತು ರವಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಜನರಿಗೆ ಹಂಚಲು ಹಣ ಸಾಗಾಟ ಮಾಡುತ್ತಿದ್ದರು ಎನ್ನುವುದನ್ನು ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದ್ದರು.
ಬಂಧಿತರಿಂದ ಸುಮಾರು 1 ಕೋಟಿ ರೂ.ವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಹಣದ ಕಂತೆ-ಕಂತೆಗಳನ್ನು ಪೊಲೀಸರು ಲೆಕ್ಕ ಮಾಡಿ ಇಡುವ ವಿಡಿಯೋ ವೈರಲ್ ಆಗಿದೆ.