ಪೋಲೀಸರಿಗಾಗಿ ಪ್ರತ್ಯೇಕ ಕೋವಿಡ್ ಮಾರ್ಗಸೂಚಿಗಳ ಬಿಡುಗಡೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೋವಿಡ್ ಮಹಾಮಾರಿಯು ತೀವ್ರವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪೋಲೀಸರಿಗಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಪೋಲೀಸ್ ಇಲಾಖೆಯು ಸಿದ್ಧಪಡಿಸಿದ ಮಾರ್ಗಸೂಚಿಗಳನ್ನು ಪೋಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಬಿಡುಗಡೆಗೊಳಿಸಿದರು.

👉 ಪೊಲೀಸ್ ಸಿಬ್ಬಂದಿಗಳ ಯೋಗಕ್ಷೇಮದ ಕುರಿತು ಎಲ್ಲ ಎಸ್ಪಿಗಳು ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

👉 45 ವರ್ಷ ಮೇಲ್ಪಟ್ಟ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬಸ್ಥರಿಗೆ 2 ಲಸಿಕೆ ಕಡ್ಡಾಯ.

👉 ಪೊಲೀಸ್ ಸಿಬ್ಬಂದಿ ನಿಯಮಿತವಾಗಿ ಕೋವಿಡ್ ಪರೀಕ್ಷೆಗೆ ಒಳಪಡತಕ್ಕದ್ದು

👉 ಕೋವಿಡ್ ಮತ್ತಿತರ ರೋಗಗಳಿಂದ ಬಳಲುತ್ತಿರುವವರು ಕಚೇರಿ ಕರ್ತವ್ಯಕ್ಕೆ ಮಾತ್ರ ನೇಮಿಸಬೇಕು

👉 ಪೊಲೀಸ್ ಸಿಬ್ಬಂದಿಗಳು 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು.

👉 ಪೊಲೀಸ್ ಠಾಣೆಗಳ ಹೊರ ಮತ್ತು ಒಳ ಆವರಣ ಸ್ಯಾನಿಟೈಸ್ ಮಾಡತಕ್ಕದ್ದು.

👉 ಕರ್ತವ್ಯದ ಸಮಯದಲ್ಲಿ ಮಾಸ್ಕ್ ಫೇಸ್ ಶೀಲ್ಡ್ ಕಡ್ಡಾಯ.

👉 ಪೊಲೀಸ್ ಸಿಬ್ಬಂದಿ ಅವರ ಕುಟುಂಬಸ್ಥರ ನೆರವಿಗೆ ಸಮನ್ವಯಾಧಿಕಾರಿ ನೇಮಿಸತಕ್ಕದ್ದು.

👉 ಸಾರ್ವಜನಿಕರ ಭೇಟಿಗೆ ಪ್ರತ್ಯೇಕ ವ್ಯವಸ್ಥೆ ಮಾಡತಕ್ಕದ್ದು.

👉 ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನಿರಾಕರಿಸುವ ಆರೋಗ್ಯ ಭಾಗ್ಯದಡಿ ನೊಂದಾಯಿತ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳತಕ್ಕದ್ದು.

👉 ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಾಹನ ಸ್ಯಾನಿಟೈಸ್ ಮಾಡತಕ್ಕದ್ದು.

👉 ಅಪರಾಧಿಗಳ ತನಿಖೆ, ದಸ್ತಗಿರಿಗೆ ಹಿಂದೆ ಅನುಸರಿಸಿದ ಕ್ರಮ ಮುಂದುವರಿಸಬೇಕು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು