ಪುಣೆ(06-11-2020): ಕರ್ತವ್ಯ ನಿರತ ಪೊಲೀಸ್ ಪೇದೆಯನ್ನು ಕಾರು ಚಾಲಕ ಬಾನೆಟ್ ಮೇಲೆ ಬಹುದೂರ ಎಳೆದೊಯ್ದ ಘಟನೆ ಪುಣೆಯ ಪಿಂಪರಿ-ಚಿಂಚೌಡ್ ಪ್ರದೇಶದಲ್ಲಿ ನಡೆದಿದೆ.
ಕರ್ತವ್ಯ ನಿರತ ಸಂಚಾರಿ ಪೇದೆ ನಿಯಮವನ್ನು ಉಲ್ಲಂಘಿಸಿದ ಕಾರು ಚಾಲಕನನ್ನು ತಡೆಯಲು ಮುಂದಾಗಿದ್ದಾರೆ. ಆಗ ಕಾರು ನಿಲ್ಲಿಸದೇ ಚಾಲಕ ಸಾಗಿದ್ದಾನೆ. ಕಾರು ಚಲಿಸುತ್ತಿದ್ದಂತೆ ಸಂಚಾರಿ ಪೊಲೀಸ್ ಪೇದೆ ಕಾರಿನ ಬಾನೆಟ್ ಮೇಲೆ ಹತ್ತಿದ್ದಾರೆ. ಆದರೂ ಸಹ ಚಾಲಕ ಕಾರು ನಿಲ್ಲಿಸದೆ ಬಹುದೂರ ಎಳೆದುಕೊಂಡು ಹೋಗಿದ್ದಾನೆ.
ಈ ಕುರಿತ ವಿಡಿಯೋಗಳು ಈಗ ವೈರಲ್ ಆಗಿವೆ. ಈಗ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನನ್ನು ಬಂಧಿಸಿದ್ದಾರೆ. ಈ ಮೊದಲು ಕೂಡ ಇಂತಹ ಹಲವು ಪ್ರಕರಣಗಳು ನಡೆದಿದ್ದವು.
#WATCH | Pune: An on-duty Traffic Police personnel was dragged on the bonnet of a car in Pimpri-Chinchwad after he attempted to stop the vehicle.
The driver of the car has been arrested. #Maharashtra (5.11) pic.twitter.com/W8pQb2B4Go— ANI (@ANI) November 5, 2020