ಯುವಕನ ಮೇಲೆ ಪೊಲೀಸ್ ದೌರ್ಜನ್ಯ: ಬೈಕ್ ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ತಲೆಗೆ ಲಾಠಿಯಲ್ಲಿ ಹಲ್ಲೆ

police assult
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು(12-11-2020: ಪೊಲೀಸ್ ಪೇದೆ ವಾಹನ ನಿಯಮ ಉಲ್ಲಂಘಿಸಿದ್ದಾರೆಂದು ಅಮಾಯಕ ಯುವಕನ ತಲೆಗೆ ಲಾಠಿಯಲ್ಲಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ತಿಪುರ ಚೆಕ್ ಪೋಸ್ಟ್ ಬಳಿ ನಡೆದಿದೆ.

ಈ ಕುರಿತು ಪ್ರೆಸ್ ಕನ್ನಡದ ಜೊತೆ ಮಾತನಾಡಿದ ಸಂತ್ರಸ್ತ ಯುವಕ ಆಕರ್ಶ್, ನಾನು  ಬೈಕ್ ನಲ್ಲಿ ತೆರಳುತ್ತಿದ್ದಾಗ ಹೆಬ್ಬಾಳ ಠಾಣೆ ಪೇದೆ ಏಕಾಏಕಿ ಏನನ್ನೂ ವಿಚಾರಿಸದೆ, ಬೈಕ್ ನಿಲ್ಲಿಸಲು ಸೂಚಿಸದೆ ಲಾಠಿಯಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದಾಗಿ ನನಗೆ ರಕ್ತಸ್ರಾವವಾಗಿದೆ. ಬಳಿಕ ನಾನು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದಿದ್ದೇನೆ. ನನ್ನದು ಯಾವುದೇ ತಪ್ಪಿಲ್ಲದಿದ್ದರೂ ಪೇದೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದಾಗ ಪೊಲೀಸರು ವಿವಿಧ ಕಾರಣವನ್ನು ಹೇಳಿಕೊಂಡು ದೂರು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಇಂದು ಕಮಿಷನರ್ ಅವರನ್ನು ಭೇಟಿ ಮಾಡಿ ದೂರನ್ನು ನೀಡುವುದಾಗಿ ಹೇಳಿದ್ದಾರೆ.

ಇನ್ನು ಪೊಲೀಸ್ ಪೇದೆ ಉಮೇಶ್ ಅಮಾನವೀಯ ವರ್ತನೆಯಿಂದ ಹಲ್ಲೆಗೊಳಗಾದ ಯುವಕ ಆಕರ್ಶ್ ತಲೆಯಲ್ಲಿ ರಕ್ತಸೋರಿಕೆಯ ವಿಡಿಯೋ ವೈರಲ್ ಆಗಿದೆ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸರೇ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಬೀದಿಯಲ್ಲಿ ಹಲ್ಲೆಗೆ ಇಳಿದರೆ ಜನಸಾಮಾನ್ಯರ ಪಾಡು ಎನ್ನುವುದೇ ನಿಜಕ್ಕೂ ಆತಂಕಕಾರಿಯಾಗಿರುವುದು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು