ಗದಗ(02-12-2020): ಕಂಠಪೂರ್ತಿ ಕುಡಿದು ಪೊಲೀಸರೊಂದಿಗೆ ಕೆಲ ಯುವಕರು ರಂಪಾಟ ಮಾಡಿರುವ ಘಟನೆ ಗದಗ ನಗರದ ರಿಂಗ್ ರೋಡ್ ಬಳಿ ನಡೆದಿದೆ.
ಯುವಕರನ್ನು ಹುಬ್ಬಳ್ಳಿ ಮೂಲದ ಅಖಿಲ್ (20), ರಾಹುಲ್ (18), ಪ್ರತೀಕ್ (28), ಪ್ರಮೋದ್ (25) ಎಂದು ಗುರುತಿಸಲಾಗಿದೆ.
ಇವರ ರಂಪಾಟದಿಂದಾಗಿ ರಸ್ತೆಯಲ್ಲಿ ಸಂಚರಿಸುವವರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ.
ಯುವಕರ ತಂಡ ಪೊಲೀಸರಿಗೆ ಹುಬ್ಬಳ್ಳಿಗೆ ಬನ್ನಿ ನೋಡ್ಕೊಂತೀನಿ ಎಂದು ಅವಾಜ್ ಹಾಕಿದ್ದಾರೆ. ಪದೇ ಪದೇ ಏರು ಧ್ವನಿಯಲ್ಲಿ ಮಾತನಾಡುತ್ತಾ, ಮುಂದೆ ಇದ್ದ ಕಾರಿಗೆ ಗುದ್ದಿ, ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದನ್ನು ವಿಡಿಯೋ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯತ್ತ ಬಂದು ಅವರ ಕೈಯಲ್ಲಿನ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.