ಡಬ್ಬಲ್ ಮರ್ಡರ್| ಪೊಲೀಸರ ಮಿಂಚಿನ ಕಾರ್ಯಚರಣೆ, ಆರೋಪಿಯ ಬಂಧನ

crime news
Share on facebook
Share on twitter
Share on linkedin
Share on whatsapp
Share on telegram
Share on email
Share on print

ದಾವಣಗೆರೆ(02-11-2020):  ಅಕ್ರಮ ಸಂಬಂದವನ್ನು ಹೊಂದಿದ್ದ ಪತ್ನಿ ಮತ್ತು ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿ ಪತಿ ಜೈಲು ಸೇರಿ ಎರಡು ಮುದ್ದಾದ ಮಕ್ಕಳು ಅನಾಥರಾಗಿದ್ದಾರೆ. ಹೌದು ಇಂಥಹದೊಂದು ದುರಂತ ಕತೆ ನಡೆದಿರುವುದು ದಾವಣಗೆರೆ ಹೊನ್ನಾಳಿ ಮತ್ತು ಚನ್ನಗಿರಿಯಲ್ಲಿ.

ಕಳೆದ 9 ವರ್ಷಗಳ ಹಿಂದೆ  ಶಿವಕುಮಾರ್, ಕಾರಿಗನೂರು ಕ್ರಾಸ್ ನಿವಾಸಿ ಶ್ವೇತಳನ್ನು ಪ್ರೀತಿಸಿ ಮದುವೆಯಾಗಿದ್ದ. ಶ್ವೇತಳ ಊರಾದ ಕಾರಿಗನೂರು ಕ್ರಾಸ್ ಬಳಿಯೆ  ಮನೆಯನ್ನು ಮಾಡಿಕೊಂಡು ಜೀವನ ನಡೆಸುತಿರುತ್ತಾರೆ .ವೃತ್ತಿಯಲ್ಲಿ ಶಿವಕುಮಾರ್ ಖಾಸಗಿ ಶಾಲಾ ಶಿಕ್ಷಕನಾಗಿರುತ್ತಾನೆ. ಪತಿ ಶಾಲೆಗೆ ಹೋದ ಸಂದರ್ಭದಲ್ಲಿ ಅದೇ ಗ್ರಾಮದ ಅವಿವಾಹಿತ ವೇದಮೂರ್ತಿಯ ಜೊತೆ ಅನೈತಿಕ ಸಂಬಂದವನ್ನು ಶ್ವೇತ ಹೊಂದಿರುತ್ತಾಳೆ . ಈ ಅನೈತಿಕ ಸಂಬಂದದ ವಿಷಯ ಈಕೆಯ ಪತಿಗೂ ಸಹ ಗೊತ್ತಾಗುತ್ತದೆ. ಈ ವಿಚಾರವಾಗಿ ಪತಿ ಪತ್ನಿ ಶ್ವೇತಳಿಗೆ ಸಾಕಷ್ಠು ಭಾರಿ ಬುದ್ದಿವಾದ ಹೇಳುತ್ತಾನೆ ಅಲ್ಲದೆ ಸಂಬಂದಿಕರ ಜೊತೆಯು ಸಹ ಬುದ್ದಿವಾದ ಹೇಳುತ್ತಾರೆ.

ಆದರೆ ಶ್ವೇತ ಯಾರ ಮಾತಿಗೂ ಗೌರವ ಕೊಡದೆ ಈ ವಿಚಾರವಾಗಿ ಅ.28 ರಂದು ಮನೆಯಲ್ಲಿ ಗಂಡ ಹೆಂಡತಿಗೆ ಜಗಳವಾಗುತ್ತದೆ .ಇದೆ ದಿನ ಶ್ವೇತ ತನ್ನ ಮಗಳನ್ನು ಕರೆದುಕೊಂಡು ಮನೆಬಿಟ್ಟು ಪ್ರಿಯಕರನೊಂದಿಗೆ ಹೊನ್ನಾಳಿಗೆ ತೆರಳುತ್ತಾಳೆ . ತನ್ನ ಪತ್ನಿ ಹಾಗೂ ಆಕೆಯ ಪ್ರಿಯಕರ ಹೊನ್ನಾಳಿ ತುಂಗಭದ್ರಾ ಹೊಳೆಯ ದಂಡೆಯಲ್ಲಿರುವುದು ಶ್ವೇತಳ ಪತಿ ಶಿವಕುಮಾರನಿಗೆ ಗೊತ್ತಾಗುತ್ತದೆ. ತಕ್ಷಣ ಶಿವಕುಮಾರ್ ತನ್ನ ಇನ್ನೊಬ್ಬ ಸ್ನೇಹಿತನನ್ನು ಕಾರಲ್ಲಿ ಕರೆದುಕೊಂಡು ಅವರಿರುವ ಸ್ಥಳಕ್ಕೆ ಬಂದು ವೇದಮೂರ್ತಿಯನ್ನು ಕೊಲೆಮಾಡಿ ನೀರಿನಲ್ಲಿ ಬಿಸಾಡಿ ಪತಿ ಪತ್ನಿ ಕಾರಿಗನೂರಿಗೆ ಬರುತ್ತಾರೆ.  ನಂತರ ಇಬ್ಬರೂ ಸಾಯೋಣ ಎನ್ನುವ ತೀರ್ಮಾನಕ್ಕೆ ಬಂದು. ಅತ್ಮಹತ್ಯೆ ಮಾಡಿಕೊಳ್ಳುವ ಉಧ್ದೇಶದಿಂದ ಸೂಳೆಕೆರೆಗೆ ಬರುತ್ತಾರೆ ಅಲ್ಲಿ ಆತ್ಮಹತ್ಯೆ ಸಾದ್ಯವಾಗದೆ  ಚನ್ನಗಿರಿಗೆ ಬಂದು ವಿಷ ಕುಡಿದು ಸಾಯೋಣ ಎನ್ನುತ್ತಾರೆ. ಆ ದಿನ ಯಾವುದೇ ಅಂಗಡಿಗಳು ಬಾಗಿಲು ತೆರದಿರುವುದಿಲ್ಲ. ಶಿವಕುಮಾರ ತನ್ನ ಪತ್ನಿಯನ್ನು ಕರೆದುಕೊಂಡು  ಬಿರೂರು ಸಮ್ಮಸ್ಸಗಿ ರಸ್ತೆಯ ಮೂಲಕ ಹೋಗುವಾಗ ರಾಜಗೊಂಡನಹಳ್ಳಿ ಗ್ರಾಮದ ಒಂದು ತೋಟಕ್ಕೆ ಕರೆದುಕೊಂಡು ಹೋಗಿ ಶ್ವೇತಳನ್ನು ಕೊಲೆ ಮಾಡಿ ಕೃಷಿ ಹೊಂಡಕ್ಕೆ ಎಸೆದು ಹೋಗಿರುತ್ತಾನೆ . ಈ ಪ್ರಕರಣವನ್ನು ಬೆನ್ನಟಿದ ಚನ್ನಗಿರಿ ಹಾಗೂ ಹೊನ್ನಾಳಿ ಪೋಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ವರಿಷ್ಠಾದಿಕಾರಿಗಳಾದ ಹನುಮಂತರಾಯ ಐಪಿಎಸ್ ರವರು ತಮ್ಮ ಕಚೇರಿಯಲ್ಲಿ ಸುಧ್ಧಿಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೋಲೀಸ್ ಅದೀಕ್ಷರಾದ ಎಮ್ ರಾಜೀವ್ , ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೂಳಿ ,ಚನ್ನಗಿರಿ ವೃತ್ತ ನಿರೀಕ್ಷಕರಾದ ಆರ್ ಆರ್ ಪಾಟೀಲ್ ಪಿಎಸ್ಐ ಜಿ ಜಗದೀಶ್ ಇದ್ದರು . ಈ ಪ್ರಕರಣವನ್ನು ಕೇವಲ ಎರಡೇ ದಿನದಲ್ಲಿ ಬೇದಿಸಿದ ಪೋಲೀಸ್ ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿರುತ್ತಾರೆ .

 ವರದಿ-ಕೋಗಲೂರು ಕುಮಾರ್

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು