ತುಂಗನಗರ  ಪಿಎಸ್ಐ ತಿರುಮಲೇಶ್ ತಂಡದಿಂದ ಭರ್ಜರಿ ಬೇಟೆ| ಮೂರು ಮಂದಿ ದ್ವಿಚಕ್ರ ವಾಹನ ಕಳ್ಳರ ಬಂಧನ 

arrest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಶಿವಮೊಗ್ಗ (12-11-2020): 3 ಮಂದಿ  ದ್ವಿಚಕ್ರವಾಹನ ಕಳ್ಳರನ್ನು ಶಿವಮೊಗ್ಗ ನಗರ ಸೂಳೆಬೈಲ್  ಗೋಪಾಲಿ ಮೈದಾನದಲ್ಲಿ ಬಂಧಿಸಲಾಗಿದೆ.

ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿಗಳಾದ ಕೆ,ಎಂ ಶಾಂತರಾಜ್, ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಶೇಖರ್ ಟಿ, ಹಾಗೂ ಶಿವಮೊಗ್ಗ ಪೋಲೀಸ್ ಉಪಧೀಕ್ಷರಾದ ಉಮೇಶ್ ಈಶ್ವರ್ ನಾಯಕ್, ರವರುಗಳ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯ ಮೇರೆಗೆ ವೃತ್ತ ನಿರೀಕ್ಷರಾದ  ಟಿ,ಸಂಜೀವ್ ಕುಮಾರ್ ತುಂಗಾನಗರ ಪೋಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಜಿ, ರವರ ನೇತೃತ್ವದಲ್ಲಿ  3 ಜನ  ದ್ವಿಚಕ್ರವಾಹನ ಕಳ್ಳರನ್ನು ರಾತ್ರಿ 8 ಗಂಟೆ ಸಮಯದಲ್ಲಿ ಶಿವಮೊಗ್ಗ ನಗರ ಸೂಳೆಬೈಲ್  ಗೋಪಾಲಿ ಮೈದಾನದಲ್ಲಿ ಬಂಧಿಸಲಾಗಿದೆ.

ಬಂಧಿತರಿಂದ ಪಲ್ಸರ್ ಬೈಕ್ ಸೇರಿದಂತೆ ವಿವಿದ ಕಂಪನಿಗಳ 11 ಬೈಕ್ ಗಳನ್ನು ವಶಪಡಿಸಿಕೊಂಡಿದ್ದು ಇವುಗಳ  ಮೌಲ್ಯ ಸುಮಾರು 3.44 ಲಕ್ಷ ರೂ ಅಂದಾಜಿಸಲಾಗಿದೆ.

ತಬಾರಕ್, ಸೈಯದ್ ಸುಭಾನ್, ಜುನೈದ್ ಆಲಿಯಾಸ್ ಜಿನ್ನು ಬಂಧಿತ ಆರೋಪಿಗಳಾಗಿದ್ದಾರೆ. ಇವರುಗಳು ಶಿವಮೊಗ್ಗ ನಗರ ಸೇರಿದಂತೆ ಭದ್ರಾವತಿ ಹಾಗೂ ಕುಂಸಿ ಠಾಣಾ ವ್ಯಾಪ್ತಿಗಳಲ್ಲಿ ವಿವಿದೆಡೆ ಬೈಕ್ ಗಳನ್ನು ಕದ್ದಿರುತ್ತಾರೆ.

ಕಾರ್ಯಚರಣೆ ತಂಡದಲ್ಲಿ ಎಎಸ್ ಐ ನಾರಾಯಣ್ ಜಿಆರ್, ಸಿಬ್ಬಂದಿಗಳಾದ ಸಯ್ಯದ್ ಇಮ್ರಾನ್, ರಾಜು ಕೆಆರ್, ಗುರುನಾಯ್ಕ್ ಆರ್ ,ಲಂಕೇಶ್ ಕುಮಾರ್ ಇದ್ದರು.

ವರದಿ -ಕೋಗಲೂರು ಕುಮಾರ್

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು