ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯನ್ನೇ ಅಪಹರಿಸಿ ದರೋಡೆ

police
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(24-10-2020): ದೆಹಲಿಯಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್​ ಪೇದೆಯನ್ನೇ ಅಪಹರಣ ಮಾಡಿ ದರೋಡೆ ಮಾಡಿರುವ ಘಟನೆ ನಡೆದಿದೆ.

ಸಚಿನ್ ಎಂಬ ಪೊಲೀಸ್​ ಪೇದೆಯನ್ನು ಬಸ್​ನಲ್ಲಿ ಅಪಹರಿಸಿ ಉತ್ತರ ಪ್ರದೇಶದ ಫಿರೋಜಾಬಾದ್​ಗೆ ಕರೆದೊಯ್ದಿದ್ದಾರೆ. ಇವರು ಕಾಶ್ಮೀರಿ ಗೇಟ್​ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು.

ಕರ್ತವ್ಯದಲ್ಲಿದ್ದ ಪೇದೆಯನ್ನು ಬಸ್ ಗೆ ತುಂಬಿ ಬಸ್​ನ ಬಾಗಿಲನ್ನು ಹಾಕಿದ ಕಳ್ಳರು ಸಚಿನ್​​ರಿಂದ ಪಿಸ್ತೂಲ್​, ಪರ್ಸ್ ಹಾಗೂ ಮೊಬೈಲ್​ ಫೋನ್​ನ್ನು ಕಸಿದುಕೊಂಡಿದ್ದಾರೆ.

250 ಕಿ.ಮೀ ದೂರದವರೆಗೆ ಪೇದೆಯನ್ನು ಬಸ್ ನಲ್ಲಿ ಕೂಡಿ ಹಾಕಿಕೊಂಡು ಹೋಗಿದ್ದಾರೆ. ಫಿರೋಜಾಬಾದ್​ನಲ್ಲಿ ಬಸ್ ನಿಂದ ದೂಡಿ ಹಾಕಿದ್ದಾರೆ. ಬಳಿಕ ಪೇದೆ ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು