ನವದೆಹಲಿ(10-11-2020): ಶಾಂಘೈ ಕೋ ಅಪರೇಷನ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಪರಸ್ಪರ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕೆಂದು ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷರೂ, ಪಾಕ್ ಪ್ರಧಾನಿಯೂ ಸಭೆಯಲ್ಲೇ ಉಪಸ್ಥಿತರಾಗಿರುವುದು ಈ ಹೇಳಿಕೆಗೆ ಇನ್ನಷ್ಟು ಮಹತ್ವ ಬಂದಿದೆ.
“ಎಸ್ಸಿಒ ದೇಶಗಳ ಜೊತೆಗೆ ಸಾಂಸ್ಕೃತಿಕವಾಗಿಯೂ, ಐತಿಹಾಸಿಕವಾಗಿಯೂ ಗಟ್ಟಿ ಬಾಂಧವ್ಯವನ್ನು ಹೊಂದಿರುವ ಭಾರತವು ಇದನ್ನು ಇನ್ನಷ್ಟು ಬಲಯುತ ಗೊಳಿಸಲು ಬಯಸುತ್ತಿದೆ. ಅದಕ್ಕಾಗಿ ಪರಸ್ಪರ ಸಾರ್ವಭೌಮತೆಯನ್ನೂ, ಸಮಗ್ರತೆಯನ್ನೂ ಗೌರವಿಸವುದು ಅಗತ್ಯವಾಗಿದೆ. ದ್ವಿಪಕ್ಷೀಯ ವಿಚಾರಗಳನ್ನು ಈ ವೇದಿಕೆಗೆ ಎಳೆದು ತರುವುದು ದುರದೃಷ್ಟಕರವಾಗಿದೆ.” ಎಂದು ಪ್ರಧಾನಿ ಹೇಳಿದರು.
ಪಾಕ್ ಮತ್ತು ಚೀನಾ ವಿರುದ್ಧ ಪರೋಕ್ಷ ವಾಗ್ದಾಳಿಗೆ ಸಾಕ್ಷಿಯಾದ ಈ ಶೃಂಗ ಸಭೆಯ ನೇತೃತ್ವವನ್ನು ರಷ್ಯಾದ ಅದ್ಯಕ್ಷ ವ್ಲಾದಿಮಿರ್ ಪುತಿನ್ ವಹಿಸಿದ್ದರು.