ಮನ್ ಕೀ ಬಾತ್:  ಪ್ರಧಾನಿ ಭಾಷಣದ ಮುಖ್ಯಾಂಶಗಳು

modhi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(29-11-2020): ಪ್ರಧಾನಿ ಮೋದಿ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಕೆನಡಾದಿಂದ ಅನ್ನಪೂರ್ಣ ದೇವಿಯ ಪ್ರತಿಮೆ ದೇಶಕ್ಕೆ ವಾಪಸ್ ಆಗುತ್ತಿದೆ ಎಂದು ಮೋದಿ ಭಾಷಣವನ್ನು ಆರಂಭಿಸಿದ್ದು, ಹಲವು ವರ್ಷಗಳಿಂದ ಭಾರತ ಪುರಾತನ ಪ್ರತಿಮೆಯನ್ನು ವಾಪಸ್ ತರುವ ಕೆಲಸವನ್ನು ಮಾಡುತ್ತಿದೆ. ವಾರಣಾಸಿಯಿಂದ ಕಾಣೆಯಾಗಿದ್ದ ಅನ್ನಪೂರ್ಣ ದೇವಿಯ ಪ್ರತಿಮೆಯನ್ನು ವಾಪಸ್ ತರಲಾಗುತ್ತಿದೆ. ಭಾರತದ ಕಡೆಯಿಂದ ಕೆನಡಾಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ನಾವು ದೆಹಲಿಯ ಮ್ಯೂಸಿಯಂನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದಾಗಿದೆ. ತಂತ್ರಜ್ಞಾನದಿಂದ ಇದು ನಮಗೆ ಸಾಧ್ಯವಾಗಿದೆ. ಕೋವಿಡ್ ಸಮಯದಲ್ಲಿ ಪ್ರಕೃತಿಯೊಂದಿಗೆ ಕಾಲ ಕಳೆಯಲು ನಮಗೆ ಅವಕಾಶ ಸಿಕ್ಕಿದೆ. ಭಾರತಕ್ಕೆ ಭೇಟಿ ನೀಡಿದ ವಿದೇಶಿಗರು ತಮ್ಮ ದೇಶಕ್ಕೆ ವಾಪಸ್ ಆದ ಬಳಿಕ ಇಲ್ಲಿಯ ಪಾಕೃತಿಕ ಸೌಂದರ್ಯವನ್ನು ಅಲ್ಲಿಯ ಜನರಿಗೆ ತಿಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾರತೀಯ ಸಂಸ್ಕೃತಿ ಅನೇಕ ರಾಷ್ಟ್ರಗಳಿಗೆ ಮಾದರಿಯಾಗಿದೆ. ಹಲವು ದೇಶಗಳು ನಮ್ಮ ಸಂಸ್ಕೃತಿ ಅರಿಯುವ ಪ್ರಯತ್ನ ಮಾಡುತ್ತಿವೆ. ನಮ್ಮ ದೇಶದ ಸಂಸ್ಕೃತಿ ಬಗ್ಗೆ ಮಾತನಾಡುವಾಗ ಸಿಖ್ ಸಮಯದಾಯದ ಬಗ್ಗೆ ಮಾತನಾಡಬೇಕು ಎಂದು ಹೇಳಿದ್ದಾರೆ.

ಭಾರತದ ಸಂಸ್ಕೃತಿ ಮತ್ತು ಗ್ರಂಥವು ಯಾವಾಗಲೂ ಇಡೀ ಜಗತ್ತನ್ನು ಆಕರ್ಷಿಸುವ ಕೇಂದ್ರವಾಗಿದೆ. ಕೆಲವರು ಅದನ್ನು ಹುಡುಕಿಕೊಂಡು ಭಾರತಕ್ಕೆ ಬಂದು ಜೀವನಕ್ಕಾಗಿ ಇಲ್ಲಿಯೇ ಇದ್ದರು. ಕೆಲವರು ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ತಮ್ಮ ದೇಶಗಳಿಗೆ ಮರಳಿದರು.

ಭಾರತದ ಸಂಸ್ಕೃತಿ ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿದೆ. ಅಂತಹ ಒಂದು ಪ್ರಯತ್ನವೆಂದರೆ ಬ್ರೆಜಿಲ್ ಮೂಲದ ಜೊನಾಸ್ ಮಾಸೆಟ್ಟಿ ಮತ್ತು ವೇದಾಂತ ಮತ್ತು ಗೀತಾವನ್ನು ಅಲ್ಲಿನ ಜನರಲ್ಲಿ ಜನಪ್ರಿಯಗೊಳಿಸಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ ನಂತರ, ಜೊನಸ್ ತನ್ನ ಸ್ಟಾಕ್ ಮಾರ್ಕೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಂತರ ಅವರು ಭಾರತೀಯ ಸಂಸ್ಕೃತಿಯತ್ತ, ವಿಶೇಷವಾಗಿ ವೇದಾಂತದತ್ತ ಆಕರ್ಷಿತರಾದರು. ಅವರು ಭಾರತದಲ್ಲಿ ವೆಂದಾಂತವನ್ನು ಅಧ್ಯಯನ ಮಾಡಿದರು ಮತ್ತು ಕೊಯಮತ್ತೂರಿನ ಅರ್ಷಾ ಗುರು ಗುರುಕುಲಂನಲ್ಲಿ 4 ವರ್ಷಗಳನ್ನು ಕಳೆದರು. ಜೋನಾಸ್ ಅವರ ಪ್ರಯತ್ನಕ್ಕೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

ದೇಶದ ಸಂಸತ್ತಿನಲ್ಲಿ ಸಂಸ್ಕೃತದಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ನ್ಯೂಜಿಲೆಂಡ್‌ನ ಕಿರಿಯ ಮತ್ತು ಹೊಸದಾಗಿ ಆಯ್ಕೆಯಾದ ಸಂಸದರಲ್ಲಿ ಒಬ್ಬರಾದ ಡಾ. ಗೌರವ್ ಶರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಹಿಮಾಚಲ ಪ್ರದೇಶದ ಹಮೀರ್‌ಪುರದ ಮೂಲದ ಶರ್ಮಾ (33) ಇತ್ತೀಚೆಗೆ ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್ ವೆಸ್ಟ್ ಫಾರ್ ಲೇಬರ್ ಪಾರ್ಟಿಯಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು.

ಪ್ರಕೃತಿಯನ್ನು ಗಮನಿಸುವುದರಲ್ಲಿ ನಮ್ಮ ದೃಷ್ಟಿಕೋನವು ಬದಲಾವಣೆಗೆ ಒಳಗಾಯಿತು. ನಾವು ಈಗ ಚಳಿಗಾಲಕ್ಕೆ ಕಾಲಿಡುತ್ತಿದ್ದೇವೆ. ಪ್ರಕೃತಿಯ ಅಸಂಖ್ಯಾತ ವರ್ಣಗಳನ್ನು ನಾವು ನೋಡುತ್ತೇವೆ. ಸಾಂಕ್ರಾಮಿಕವು ನಮ್ಮ ಕೆಲಸದ ವಿಧಾನಗಳನ್ನು ಬದಲಾಯಿಸಿದೆ. ಪ್ರಕೃತಿಯನ್ನು ಹೊಸ ರೀತಿಯಲ್ಲಿ ಅನುಭವಿಸಲು ಇದು ನಮಗೆ ಅವಕಾಶವನ್ನು ಒದಗಿಸಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಾನು ಆಸಕ್ತಿದಾಯಕ ಯೋಜನೆಯ ಬಗ್ಗೆ ಓದುತ್ತಿದ್ದೆ. ನಾರ್ವೆಯ ಉತ್ತರದಲ್ಲಿ ಸ್ವಾಲ್ಬಾರ್ಡ್ ಎಂಬ ದ್ವೀಪವಿದೆ. ಆರ್ಕ್ಟಿಕ್ ವರ್ಲ್ಡ್ ಆರ್ಕೈವ್ ಎಂಬ ಯೋಜನೆಯನ್ನು ಈ ದ್ವೀಪದಲ್ಲಿ ಸ್ಥಾಪಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ವಸ್ತುಸಂಗ್ರಹಾಲಯಗಳು ಮತ್ತು ಇತರ ಪಾರಂಪರಿಕ ತಾಣಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಕರೋನದ ಹೊರತಾಗಿಯೂ, ಜನರು ವಿಶ್ವ ಪರಂಪರೆಯನ್ನು ನವೀನ ರೀತಿಯಲ್ಲಿ ಆಚರಿಸುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.

ಮನ್ ಕಿ ಬಾತ್ ಎಂಬುದು ಪ್ರಧಾನಮಂತ್ರಿಯ ಮಾಸಿಕ ರೇಡಿಯೊ ಕಾರ್ಯಕ್ರಮವಾಗಿದ್ದು, ರಾಷ್ಟ್ರವನ್ನು ಉದ್ದೇಶಿಸಿ, ಇದನ್ನು ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಸಾರ ಮಾಡಲಾಗುತ್ತದೆ. ಈ ಬಾರಿ ಪ್ರಧಾನಿ ಕೋವಿಡ್ ಲಸಿಕೆ ಉಚಿತವಾಗಿ ನೀಡುವ ಬಗ್ಗೆ ಘೋಷಣೆ ಮಾಡುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಇದು ಸುಳ್ಳಾಗಿದೆ. ಆರ್ಥಿಕ ಸಂಕಷ್ಟ, ನಿರುದ್ಯೋಗ, ಪ್ರವಾಹ, ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಸಾಮಾನ್ಯ ಶೈಲಿಯಲ್ಲೇ ಮಾತನಾಡಿ ಭಾಷಣ ಮಾಡಿ ಮಾತನ್ನು ಮಗಿಸಿದ್ದು, ಜನರಲ್ಲಿ ನಿರಾಶೆಯುಂಟು ಮಾಡಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು