ಪಿಎಂ ಕೇರ್ಸ್ ಫಂಡ್ ಗೆ 2.51ಲಕ್ಷ ದೇಣಿಗೆ ನೀಡಿದವನ ತಾಯಿಗೆ ಬೆಡ್ ಸಿಗಲಿಲ್ಲ: ಇನ್ನೆಷ್ಟು ದೇಣಿಗೆ ಕೊಡಬೇಕು ಎಂದ ಸಲಹೆ ಕೇಳಿದ ವ್ಯಕ್ತಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಪಿಎಂ ಕೇರ್ಸ್ ಫಂಡ್‌ಗೆ 2 ಲಕ್ಷದ 51 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದ್ದೇನೆ, ಇಷ್ಟು ಹಣ ದೇಣಿಗೆ ನೀಡಿದ್ದರು ನನ್ನ ತಾಯಿಗೆ ಒಂದು ಬೆಡ್ ಸಿಗಲಿಲ್ಲ. ಅವರು ಸಾವನ್ನಪ್ಪಿದ್ದಾರೆ ಎಂದು ವಿಜಯ ಪಾರೀಖ್ ಎನ್ನುವರು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ.ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ರೋಗದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಂಡ್‌ ಸ್ಥಾಪಿಸಿತ್ತು. ಹಲವು ಬೆಳವಣಿಗೆಗಳ ಬಳಿಕ ಅದೊಂದು ಸರ್ಕಾರೇತರ ಸಂಸ್ಥೆ ಎಂದು ಸರ್ಕಾರ ಘೋಷಿಸಿ, ಅದರ ವಿವರ ನೀಡಲಾಗುವುದಿಲ್ಲ ಎಂದು ತಿಳಿಸಿದೆ.

ದೇಶ – ವಿದೇಶಗಳಿಂದ ಕೋಟ್ಯಾಂತರ ಮಂದಿ ಪಿಎಂ ಕೇರ್ಸ್ ಫಂಡ್‌ಗೆ ಕೋಟಿಗಟ್ಟಲೆ ಹಣ ದೇಣಿಗೆ ನೀಡಿದ್ದಾರೆ. ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ದೇಣಿಗೆ ನೀಡಿದ್ದು, ಜನರಿಗೆ ಸಹಾಯ ಮಾಡಲು ತಿಳಿಸಿದ್ದಾರೆ. ಸ್ಟಾರ್ ನಟ- ನಟಿಯರು ಸೇರಿದಂತೆ ಹಲವು ಸೆಲೆಬ್ರಿಟಿ , ಉದ್ಯಮಿಗಳು ಇದಕ್ಕೆ ಹಣ ನೀಡಿದ್ದಾರೆ. ಆದರೆ, ಪಿಎಮ್ ಕೇರ್ಸ್ ಫಂಡ್ ಗೆ ಬಂದ ಹಣ ಲೆಕ್ಕ ಸಿಗುವುದಿಲ್ಲ, ಆ ಹಣ ಜನರಿಗೆ ದೊರಕುತ್ತಿಲ್ಲ ಎಂದು ಈಗಾಗಲೇ ಈ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗುತ್ತಿವೆ. ಈಗ ಅಹ್ಮದಾಬಾದ್‌ ಮೂಲದ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ ಈ ಟೀಕೆಗೆ ಪುಷ್ಠಿ ನೀಡಿದ್ದಾರೆ. ಸಾವಿರಾರು ಜನರು ವಿಜಯ್ ಪಾರೀಖ್ ಗೆ ಬೆಂಬಲಿಸಿ ಲೈಕ್ ಒತ್ತಿದ್ದಾರೆ.

ವಿಜಯ್ ಪರೀಖ್ ಎಂಬುವವರು ಜುಲೈ 10 ರಂದು ಪಿಎಂ ಕೇರ್ಸ್ ಫಂಡ್‌ಗೆ 2 ಲಕ್ಷದ 51 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಅದರ ರಸೀದಿ ಕೂಡ ಟ್ವಿಟ್ಟರ್ ನಲ್ಲಿ ಹಂಚಿದ್ದಾರೆ. ಆದರೆ ಇಷ್ಟು ಮೊತ್ತದ ಹಣವನ್ನು ದೇಣಿಗೆ ನೀಡಿದ್ದರು ನನ್ನ ತಾಯಿಗೆ ಒಂದು ಬೆಡ್ ಸಿಗಲಿಲ್ಲ. ಅವರು ಸಾವನ್ನಪ್ಪಿದ್ದಾರೆ. ಇನ್ನು ಮುಂದಿನ ಕೊರೊನಾ 3 ಅಲೆಯಲ್ಲಿ ಬೆಡ್ ಕಾಯ್ದಿರಿಸಲು ನಾನು ಎಷ್ಟು ಹೆಚ್ಚು ದೇಣಿಗೆ ನೀಡಬೇಕೆಂದು ದಯವಿಟ್ಟು ಸಲಹೆ ನೀಡಿ, ನಾನು ಮತ್ತಷ್ಟು ಮನೆಯ ಸದಸ್ಯರನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ತಮ್ಮ ನೋವು ಟ್ವೀಟ್ ಮೂಲಕ ಹೇಳಿದ್ದಾರೆ.

ವಿಜಯ ಪಾರೀಖ್ ಅವರು ತಮ್ಮ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್‌ನಾಥ್‌ ಸಿಂಗ್, ಸ್ಮೃತಿ ಇರಾನಿ, ರಾಷ್ಟ್ರಪತಿ ಭವನವನ್ನು ಟ್ಯಾಗ್ ಮಾಡಿದ್ದಾರೆ. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು