ಹುಬ್ಬಳ್ಳಿ (24-10-2020): ನೀತಿಗಳನ್ನು ಉಲ್ಲಂಘಿಸಿರುವ 3 ಅಪ್ಲಿಕೇಶನ್ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ಗಳನ್ನು ತೆಗೆದುಹಾಕಿದೆ.
ಇಂಟರ್ನ್ಯಾಷನಲ್ ಡಿಜಿಟಲ್ ಅಕೌಂಟೆಬಿಲಿಟಿ ಕೌನ್ಸಿಲ್ (ಐಡಿಸಿಎ) ಯಿಂದ ಸೂಚನೆ ಸ್ವೀಕರಿಸಿದ ನಂತರ ಆಂಡ್ರಾಯ್ಡ್ ತಯಾರಕರು ಪ್ಲೇ ಸ್ಟೋರ್ನಿಂದ ಮಕ್ಕಳು ಬಳಸುವ ಮೂರು ಜನಪ್ರಿಯ ಅಪ್ಲಿಕೇಶನ್ಗಳನ್ನು ಅಳಿಸಿದ್ದಾರೆ.
ಪ್ರಿನ್ಸೆಸ್ ಸಲೂನ್, ನಂಬರ್ ಕಲರಿಂಗ್ ಮತ್ತು ಕ್ಯಾಟ್ಸ್ & ಕಾಸ್ಪ್ಲೇ ಎಂದು ಗುರುತಿಸಲಾದ ಮೂರು ಅಪ್ಲಿಕೇಶನ್ಗಳು ಪ್ಲೇ ಸ್ಟೋರ್ ನೀತಿಗಳನ್ನು ಉಲ್ಲಂಘಿಸಿ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳಾಗಿರುವ ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತಿವೆ ಸೋರಿಕೆ ಮಾಡುತ್ತಿರುವ ವಿಚಾರ ಪತ್ತೆಯಾದ ಬೆನ್ನಲ್ಲೇ ಈ ನಿರ್ಧಾರವನ್ನು ಗೂಗಲ್ ತೆಗೆದುಕೊಂಡಿದೆ.
ನಮ್ಮ ಸಂಶೋಧನೆಯಲ್ಲಿ ನಾವು ಗಮನಿಸಿದಾಗೆ ಈ ಅಪ್ಲಿಕೇಶನ್ಗಳಲ್ಲಿನ ಡೇಟಾ ಬಗ್ಗೆ ಗಂಭೀರ ಕಳವಳವಿದೆ ಎಂದು ಐಡಿಎಸಿ ಅಧ್ಯಕ್ಷ ಕ್ವೆಂಟಿನ್ ಪಾಲ್ಫ್ರೇ ಟೆಕ್ ಕ್ರಂಚ್ಗೆ ತಿಳಿಸಿದ್ದರು.