ನವದೆಹಲಿ(12-10-2020): ಮಹೇಂದ್ರ ಅಂಡ್ ಮಹೇಂದ್ರ ಕಂಪನಿಯ ಆನಂದ್ ಮಹೀಂದ್ರಾ ಹೊಸ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದು, ಅದಕ್ಕೆ ಅತ್ಯುತ್ತಮ ಶೀರ್ಷಿಕೆ ಕೊಟ್ಟವರಿಗೆ ಕಾರು ಗಿಫ್ಟ್ ನೀಡುವುದಾಗಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆನಂದ್ ಮಹೀಂದ್ರಾ, ಕಟ್ಟಡವೊಂದರ ಮೇಲೆ ಡಿಶ್ ಟಿವಿಯ ಉಪಕರಣ ಅಳವಡಿಸಿದ್ದು, ಅದರ ಮೇಲೆ ಮಂಗವೊಂದು ಕುಳಿತಿದೆ. ಅದಕ್ಕೆ ಅತ್ಯುತ್ತಮ ಶೀರ್ಷಿಕೆ ಕೊಡುವಂತೆ ಹೇಳಿದ್ದಾರೆ. ಹಿಂದಿ ಅಥವಾ ಇಂಗ್ಲೀಷ್ ನಲ್ಲಿ ಶೀರ್ಷಿಕೆ ಕೊಡಬೇಕು. ಎರಡು ಭಾಷೆಯಲ್ಲಿ ಕೂಡ ಬಹುಮಾನ ಕೊಡುವುದಾಗಿ ಹೇಳಿದ್ದಾರೆ.
ಇನ್ನು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದೇ ತಡ ಜನ ಒಂದಲ್ಲೊಂದು ವಿಶೇಷ ಶೀರ್ಷಿಕೆ ಕೊಟ್ಟು ಬಹುಮಾನ ಕೊಡುವಂತೆ ಕೇಳುತ್ತಿದ್ದಾರೆ.