ಸುಳ್ಳು ಕೇಸ್ ನಲ್ಲಿ ಜೀವನದ ಅಮೂಲ್ಯ 8ವರ್ಷಗಳನ್ನು ಜೈಲಿನಲ್ಲಿ ಕಳೆದ ಸಂಶೋಧನಾ ವಿದ್ಯಾರ್ಥಿ

arrest
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಣಿಪುರ(05-01-2021): ಸಂಶೋಧನಾ ವಿದ್ಯಾರ್ಥಿನಿಯನ್ನು ಅತ್ಯಾಚಾರ- ಕೊಲೆ ಮಾಡಿದ್ದಾನೆಂಬ ಸುಳ್ಳು ಆರೋಪದಿಂದ ಅನ್ಯಾಯವಾಗಿ 8ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ್ದ ಅಮಾಯಕ ವ್ಯಕ್ತಿಗೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ.

2013ರಲ್ಲಿ ಸಂಶೋಧನಾ ವ್ಯಕ್ತಿ ತೌದಮ್ ಜಿಬಲ್ ಸಿಂಗ್ ಎಂಬಾತ ಅತ್ಯಾಚಾರ -ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದ. ಆದರೆ, ಸ್ಥಳೀಯ ನ್ಯಾಯಾಲಯ ಇತ್ತೀಚೆಗೆ ಆತನನ್ನು ನಿರಪರಾಧಿ ಎಂದು ಪರಿಗಣಿಸಿ ಅವರನ್ನು ದೋಷಮುಕ್ತಗೊಳಿಸಿದೆ.

ಈತನಿಗೆ ಎಂಟು ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಿ ಆತನ ಮನೆಯನ್ನೇ ಸುಟ್ಟು ಹಾಕಲಾಗಿತ್ತು. ಇದೀಗ ಮಣಿಪುರ ಸಿಎಂ ಬೀರೇನ್ ಸಿಂಗ್ ಆತನ ಕತೆ ಕೇಳಿ ಮನಕರಗಿ, ಮನೆ ಕಟ್ಟಿಸಿಕೊಡೋದಲ್ಲದೆ, ಅರಣ್ಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ ಕೂಡ ನೀಡುವ ಭರವಸೆ ನೀಡಿದ್ದಾರೆ. ಈ ಮೂಲಕ ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ ಮನನೊಂದವನಿಗೆ ಧೈರ್ಯ ತುಂಬಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು