ಇಡಿ ಅಧಿಕಾರಿಗಳು ಬರಿಗೈಯಲ್ಲಿ ಹೋಗಿದ್ದಾರೆ- ಪಿಎಫ್ ಐ

pfi
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(04-12-2020):  ಪಿಎಫ್ ಐ ಉನ್ನತ ನಾಯಕರ ಮನೆಯ ಮೆಲಿನ ದಾಳಿಯ ವೇಳೆ ಪೊಲೀಸರಿಗೆ ಕಾನೂನು ಬದ್ಧ ದಾಖಲೆ ಮಾತ್ರ ಸಿಕ್ಕಿದೆ ಎಂದು ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿದ್ದಾರೆ.

ನಿನ್ನೆ ಪಿಎಫ್ ಐ ನಾಯಕರಾದ ಸಲಾಂ, ಅನೀಸ್ ಅಹ್ಮದ್ ನಝರುದ್ದೀನ್ ಅವರಿಗೆ ಸೇರಿದ ಹಲವು ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೊಂದು ಪೂರ್ವಾಗ್ರಹ ಪೀಡಿತ ಮತ್ತು ಅಧಿಕಾರದ ದುರುಪಯೋಗದ ಕ್ರಮ ಎಂದು ನಿನ್ನೆ ಪಿಎಫ್ ಐ ಹೇಳಿತ್ತು.

ಪಾಪ್ಯಲರ್ ಫ್ರಂಟ್ ಇಂದು ಬೆಂಗಳೂರಿನ ಇಂಡಿಯನ್ ಸೋಷಿಯಲ್ ಇನ್ಸ್ ಟಿಟ್ಯೂಟ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಾರಿ ನಿರ್ದೇಶನಾಲಯದ ಈ ಕ್ರಮವನ್ನು ಖಂಡಿಸಿದ್ದು, ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಮಾತನಾಡಿ,ದೇಶಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಈ ತಂತ್ರ ನಡೆಸಲಾಗಿದೆ. ವಿಶೇಷವಾಗಿ ನಮ್ಮ ಮೇಲೆ ಕಾರ್ಯಾಚರಣೆ ನಡೆದಾಗ ಅಧಿಕಾರಿಗಳಿಗೆ ಕಾನೂನುಬದ್ಧ ದಾಖಲೆಗಳ ಹೊರತಾಗಿ ಬೇರೇನೂ ದೊರಕಿಲ್ಲ. ಮಾರ್ಚ್ ತಿಂಗಳಲ್ಲಿ ಯಾವ ರೀತಿಯ ವಿಚಾರಣೆ ನಡೆದಿತ್ತೋ, ಅದೇ ಈಗ ಪುನರಾವರ್ತನೆಯಾಗಿದೆಯಷ್ಟೆ ಎಂದು ಹೇಳಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು