ಬೆಳ್ತಂಗಡಿ(25-02-2021): ಸಂಘಟನಾ ಕಾರ್ಯವೈಖರಿಯಲ್ಲಿ ನಿರತರಾಗಿದ್ದ ಇಬ್ಬರು ಪಿ ಎಫ್ ಐ ಕಾರ್ಯಕರ್ತರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ ಉತ್ತರ ಪ್ರದೇಶ ಸರಕಾರ ಮತ್ತು ಪೊಲೀಸರ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು.
ಬೆಳ್ತಂಗಡಿ ಜಿಲ್ಲಾ ವತಿಯಿಂದ ಕಕ್ಕಿಂಜೆ, ಉಜಿರೆ, ಬೆಳ್ತಂಗಡಿ, ಕಾಜೂರು, ಗುರುವಾಯನಕೆರೆ, ಕನ್ನಡಿಕಟ್ಟೆ, ಪಿಳ್ಯ, ಪಡ್ಡಂದಡ್ಕ, ಮದ್ದಡ್ಕ, ಮಡಂತ್ಯಾರು, ಪುಂಜಾಲಕಟ್ಟೆ, ಪಾಂಡವರಕಲ್ಲು, ಮೂರುಗೋಳಿ, ಬಂಗೇರಕಟ್ಟೆ, ಕುದ್ರಡ್ಕ, ವಾಮದಪದವು ಮತ್ತು ಎನ್ ಸಿ ರೋಡ್ ಸೇರಿದಂತೆ 17 ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ
ಘೋಷಣೆ ಮತ್ತು ಪ್ಲೆಕಾರ್ಡ್ ಪ್ರದರ್ಶನಗಳ ಮೂಲಕ ಉತ್ತರ ಪ್ರದೇಶ ಸರಕಾರ ಮತ್ತು ಉತ್ತರ ಪ್ರದೇಶ ಪೊಲೀಸರ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಸ್ಥಳೀಯ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗಿನ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.