ಗಂಭೀರ ಆರೋಪ ಹೊರಿಸಿ ಇಬ್ಬರು ಪಿಎಫ್ ಐ ಕಾರ್ಯಕರ್ತರ ಬಂಧನ

pfi activist
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ(17-02-2021): ಸರಣಿ ದಾಳಿಗಳನ್ನು ನಡೆಸಲು ಸಂಚು ಆರೋಪಿಸಿ ಇಬ್ಬರು  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯರನ್ನು ಯುಪಿ ಎಸ್‌ಟಿಎಫ್ ಪೊಲೀಸರು ಬಂಧಿಸಿದ್ದಾರೆ.

ಕೇರಳದ ನಿವಾಸಿಗಳಾದ ಅನ್ಸದ್ ಬದ್ರುದ್ದೀನ್ ಮತ್ತು ಫಿರೋಜ್ ಖಾನ್ ಬಂಧಿತರು.ಇವರ ಮೇಲೆ ಸಂಘ ಪರಿವಾರದ ನಾಯಕರ ಹತ್ಯೆಗೆ ಸಂಚು ಆರೋಪವನ್ನು ಹೊರಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಪ್ರಶಾಂತ್ ಕುಮಾರ್ ಇಬ್ಬರ ಬಂಧನವನ್ನು ಖಚಿತಪಡಿಸಿದ್ದಾರೆ. ಬಂಧಿತರಿಂದ ಕೆಲವೊಂದು ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಬಂಧಿತರಿಂದ ರೈಲ್ವೆ ಟಿಕೆಟ್‌ಗಳು, ನಾಲ್ಕು ಎಟಿಎಂ ಕಾರ್ಡ್‌ಗಳು, ಲೈಸೆನ್ಸ್, ಮೆಟ್ರೋ ರೈಲ್ವೇ ಕಾರ್ಡ್ ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು