ಬಂಟ್ವಾಳ (26-10-2020): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತುಂಬೆ ವಲಯ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ಜಂಟಿಯಾಗಿ ರಕ್ತದಾನ ಶಿಬಿರವನ್ನು ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇದರ ಸಭಾಂಗಣದಲ್ಲಿ ಆಯೋಜಿಸಿತ್ತು.
ತುಂಬೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಲತೀಫ್ ಪೈಝಿಯವರು ಶಿಬಿರವನ್ನು ಉದ್ಘಾಟಿಸಿದರು. ಶಿಬಿರದ ಅಧ್ಯಕ್ಷ ಸ್ಥಾನವನ್ನು ಪಿ.ಎಫ್.ಐ ಬಂಟ್ವಾಳ ವಲಯಾಧ್ಯಕ್ಷರಾದ ಸಲೀಮ್ ಕುಂಪನಮಜಲು ವಹಿಸಿದ್ದರು ತುಂಬೆ ಸುಲ್ತಾನ್ ಖ್ಯಾತಿಯಾದ ದಿ..ಅಹ್ಮದ್ ಹಾಜಿ ಮುಹಿಯುದ್ದೀನ್ ಸ್ಮರಣಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ(ಆಡಳಿತಾಧಿಕಾರಿ,ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ),ಎಸ್.ಬಿ.ಅಬ್ದುಲ್ ಹಮೀದ್(ಗೌರವಾಧ್ಯಕ್ಷರು,ಎಸ್ ಎಸ್ ಎಫ್ ತುಂಬೆ),ಹಬೀಬುಲ್ಲಾ(ಗೌರವಾಧ್ಯಕ್ಷರು,ಎಸ್ ಕೆ ಎಸ್ ಎಸ್ ಎಸ್ ತುಂಬೆ),ಅಬ್ದುಲ್ ಕಬೀರ್(ವ್ಯವಸ್ಥಾಪಕರು,ಬಿ.ಎ.ಶಿಕ್ಷಣ ಸಂಸ್ಥೆ,ತುಂಬೆ), ಮುಹಮ್ಮದ್ ಝಹೂರ್(ಮಾಜಿ ಸದಸ್ಯರು,ತುಂಬೆ ಗ್ರಾಮ ಪಂಚಾಯಿತಿ),ಅಬ್ದುಲ್ ಅಝೀಝ್(ಎಸ್ ಡಿ ಪಿ ಐ ತುಂಬೆ ಗ್ರಾಮ ಸಮಿತಿ), ಮುಹಮ್ಮದ್ ಇರ್ಫಾನ್(ಅಧ್ಯಕ್ಷರು,ಪಿ.ಎಫ್.ಐ ಫರಂಗಿಪೇಟೆ ವಲಯ),ಮೂಸಬ್ಬ(ಪ್ರಧಾನ ಕಾರ್ಯದರ್ಶಿ,ಎಮ್.ಜೆ.ಎಮ್ ತುಂಬೆ),ಆದಮ್ ಸಿ.ಎಮ್(ಅಧ್ಯಕ್ಷರು,ರಿಕ್ಷಾ ಚಾಲಕ ಮಾಲಕರ ಸಂಘ ತುಂಬೆ) ಇವರುಗಳು ವಹಿಸಿದ್ದರು.
ಕೊರೋನಾ ಲಾಕ್ಡೌನ್ ಸಂಕಷ್ಟ ಕಾಲದಲ್ಲಿ ಜೀವದ ಹಂಗು ತೊರೆದು ವೈದ್ಯಕೀಯ ಸೇವೆ ಮಾಡಿದಂತಹ ಡಾ.ಕಿರಣ್ ಶೆಟ್ಟಿ(ವೈದ್ಯಾಧಿಕಾರಿ,ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ),ಡಾ.ಸುದರ್ಶನ್(ವೈದ್ಯಾಧಿಕಾರಿ,ಪುದು ಆರೋಗ್ಯ ಕೇಂದ್ರ) ಇವರುಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಕಿರಣ್ ಶೆಟ್ಟಿಯವರು ಶಿಬಿರದ ಪ್ರಥಮ ರಕ್ತದಾನ ಮಾಡಿ ಚಾಲನೆ ನೀಡಿದರು. ಪಿ.ಎಫ್.ಐ ಕಾರ್ಯಕರ್ತರು,ಮಹಿಳೆಯರು,ಬೆಂಬಲಿಗರು,ಇತರ ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಗೂ ಫಾದರ್ ಮುಲ್ಲರ್ ಆಸ್ಬತ್ರೆಯ ಸಿಬ್ಬಂದಿಗಳು ಕೂಡ ರಕ್ತದಾನ ಮಾಡಿದರು.
ರಕ್ತದಾನಿಗಳಿಗೆ ಸಂಘಟನೆಯ ಪದಾಧಿಕಾರಿಗಳಿಂದ ಪ್ರಮಾಣ ಪತ್ರ ವಿತರಿಸಲಾಯಿತು.ಇಮ್ತಿಯಾಝ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.