ನವದೆಹಲಿ(23-01-2021): ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದೆ. ಬೆಲೆಯೇರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಮತ್ತೆ ಶಾಕ್ ಉಂಟಾಗಿದೆ.
ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ಗೆ 25 ಪೈಸೆ ಹೆಚ್ಚಳಗೊಂಡು 85.70 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್ಗೆ 25 ಪೈಸೆ ಏರಿಕೆಗೊಂಡು 75.88 ರೂ.ಗೆ ತಲುಪಿದೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಲೀಟರ್ಗೆ 93.59 ಮತ್ತು ಡೀಸೆಲ್ ಪ್ರತಿ ಲೀಟರ್ಗೆ 83.85 ರೂ. ತಲುಪಿದೆ.
ಬೆಂಗಳೂರಿನಲ್ಲಿ 88.59 ರೂ, ಹೈದರಾಬಾದ್ನಲ್ಲಿ 89.15 ರೂ, ತಿರುವನಂತಪುರದಲ್ಲಿ 87.73 ರೂ, ಚೆನ್ನೈನಲ್ಲಿ 88.38 ರೂ, ಕೊಲ್ಕತ್ತಾದಲ್ಲಿ 87.11 ರೂ. ತಲುಪಿದೆ.