ನವದೆಹಲಿ(09-02-2021): ಪೆಟ್ರೋಲ್ ದರ ದೆಹಲಿಯಲ್ಲಿ ಮಂಗಳವಾರ ಮತ್ತೆ ಏರಿಕೆಯಾಗಿದೆ. ತೈಲ ಮಾರ್ಕೆಟಿಂಗ್ ಕಂಪೆನಿಗಳು ಒಂದು ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ 35 ಪೈಸೆ ಹೆಚ್ಚಳ ಮಾಡಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 77.48 ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 93.83ರೂ. ಮತ್ತು ಡೀಸೆಲ್ ಬೆಲೆ 84.36ರೂ ಇದೆ.
ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ. 90.22ರೂ ಮತ್ತು ಡೀಸೆಲ್ ಬೆಲೆ 82.13ರೂ. ಇದೆ. ಇದು ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಕಂಡಿರುವ ಏರಿಕೆಯಾಗಿದೆ.
ಇನ್ನು ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದ್ದು, 22ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4,406ರಿಂದ 4,465ಕ್ಕೆ ಹೆಚ್ಚಳವಾಗಿದೆ. ಬಜೆಟ್ ಬಳಿಕ ಚಿನ್ನದ ದರದಲ್ಲಿ ಇಳಿಕೆ ಕಾಣಬಹುದು ಎಂದು ನಂಬಿದ್ದ ಜನರಿಗೆ ಮತ್ತೆ ಶಾಕ್ ಉಂಟಾಗಿದೆ.