ಈ ತಿಂಗಳಲ್ಲಿ 16ನೇ ಬಾರಿ ಪೆಟ್ರೋಲ್ ಬೆಲೆ ಏರಿಕೆ:  ಉದ್ಯೋಗವಿಲ್ಲದಿದ್ದರೂ ದಂಡ, ತೆರಿಗೆ ಕಟ್ಟಲೇಬೇಕಾದ ಜನಸಾಮಾನ್ಯನ  ದುಬಾರಿ ಬದುಕು

petrol
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(27-02-2021): ತೈಲ ಕಂಪನಿಗಳು ಶನಿವಾರ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 24 ಪೈಸೆ ಮತ್ತು ಡೀಸೆಲ್ ಅನ್ನು ಲೀಟ್‌ಗೆ 15 ಪೈಸೆ ಹೆಚ್ಚಿಸಿವೆ.

ಪ್ರಸಕ್ತ ತಿಂಗಳಲ್ಲಿ 16ನೇ ಬಾರಿಯ ಬೆಲೆ ಏರಿಕೆ ಇದಾಗಿದೆ. ದೆಹಲಿಯಲ್ಲಿ ಶನಿವಾರ ಪೆಟ್ರೋಲ್ ಪ್ರತಿ ಲೀಟರ್‌ಗೆ 91.17 ಮತ್ತು ಡೀಸೆಲ್ ಲೀಟರ್‌ಗೆ 81.47 ಕ್ಕೆ ಮಾರಾಟ ಮಾಡಲಾಗುತ್ತಿದೆ.

ಲಾಕ್‌ಡೌನ್ ನಿರ್ಬಂಧಗಳು ಮತ್ತು ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಿದ ನಂತರ ಭಾರತದ ಆರ್ಥಿಕತೆಯು ಸಂಕೋಚನ ವಲಯದಿಂದ ಹೊರಬಂದಿದೆ. ಡಿಸೆಂಬರ್ 2020ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ವರ್ಷದಿಂದ ವರ್ಷಕ್ಕೆ 0.4% ರಷ್ಟು ಏರಿಕೆಯಾಗಿದೆ.

ಲಾಕ್ ಡೌನ್ ಬಳಿಕ ಜನ ಸಂಕಷ್ಟದಲ್ಲಿದ್ದರೂ ಪೆಟ್ರೋಲ್, ಡಿಸೇಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಗಗನಕ್ಕೆ ಏರಿದೆ. ಗ್ಯಾಸ್ ಸಬ್ಸಿಡಿ ನಿಲ್ಲಿಸಲಾಗಿದೆ. ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿದೆ. ಜಿಎಸ್ಟಿ, ತೆರಿಗೆಯ ಬರೆ ಬೇರೆಯೇ ಇದೆ. ಇದರ ಜೊತೆಗೆ ಟ್ರಾಫಿಕ್ ದಂಡ, ರಸ್ತೆ ಸುಂಕ, ಟೋಲ್ ಬೇರೆಯೇ ಲೆಕ್ಕ ಒಟ್ಟಾರೆ ಜನಸಾಮಾನ್ಯನ ಪಾಡು ಹೇಳ ತೀರದಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು