ಸತತ ಎಂಟನೇ ದಿನವೂ ತೈಲಬೆಲೆಯಲ್ಲಿ ಏರಿಕೆ| ಕೆಲ ರಾಜ್ಯಗಳಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ಬೆಲೆ

petrol
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(16-02-2021): ಸತತ ಎಂಟನೇ ದಿನವೂ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ ಸರಿಸುಮಾರು 30 ಪೈಸೆ ಹೆಚ್ಚಿಸಲಾಗಿದ್ದರೆ, ಡೀಸೆಲ್ ಸುಮಾರು 35 ಪೈಸೆ ಹೆಚ್ಚಾಗಿದೆ.

ಇಂದಿನ ಹೆಚ್ಚಳದ ನಂತರ, ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 89.29 ರೂ.ತಲುಪಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಿಗೆ ಹೋಲಿಸಿದರೆ ದೆಹಲಿಯ ಪರಿಸ್ಥಿತಿ ಉತ್ತಮವಾಗಿ ಕಾಣುತ್ತದೆ. ಈ ಮೂರು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಅತ್ಯಧಿಕವಾಗಿದೆ.

ಮುಂಬೈಯಲ್ಲಿ, ಒಂದು ಲೀಟರ್ ಪೆಟ್ರೋಲ್ 95.75 ರೂ.ಗೆ ಚಿಲ್ಲರೆ ಮಾರಾಟವಾಗಿದ್ದರೆ, ಕೆಲವು ಜಿಲ್ಲೆಗಳಲ್ಲಿ, ಒಂದು ಲೀಟರ್ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ – ಇದು ದೇಶದಲ್ಲಿ ಹಿಂದೆಂದೂ ಸಂಭವಿಸಿರದ ದಾಖಲೆ ಮಟ್ಟದ ಏರಿಕೆಯಾಗಿದೆ.

ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಮಧ್ಯಪ್ರದೇಶ ಮತ್ತು ರಾಜಸ್ಥಾನದಾದ್ಯಂತದ ಹಲವಾರು ನಗರಗಳಲ್ಲಿ ಪೆಟ್ರೋಲ್ ಬೆಲೆ 100ರ ಸಮೀಪದಲ್ಲಿದೆ, ಅಲ್ಲಿ ಸರಾಸರಿ ದರ ಸುಮಾರು 98-99 ರೂ.ಇದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 90.54 ರೂ.ಗೆ ಏರಿಕೆಯಾದರೆ, ಚೆನ್ನೈನಲ್ಲಿ 91.45 ರೂ, ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 92 ರೂ, ಜೈಪುರದಲ್ಲಿ 95.75 ರೂ. ಹೆಚ್ಚಳವಾಗಿದೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು