ನವದೆಹಲಿ(15-02-2021): ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸತತ ಏಳನೇ ದಿನವೂ ಹೆಚ್ಚಳವಾಗಿದ್ದು, ಇಂಧನ ಬೆಲೆ ದಾಖಲೆಯ ಗರಿಷ್ಠ ಮಟ್ಟದಲ್ಲಿ ಹೆಚ್ಚಳವಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 26 ಪೈಸೆ ಹೆಚ್ಚಳವಾಗಿ 88.99 ರೂ.ಗೆ ತಲುಪಿದ್ದು, ಡೀಸೆಲ್ ಬೆಲೆ ಲೀಟರ್ಗೆ 79.35 ಪೈಸೆ ಗೆ ಏರಿಕೆಯಾಗಿದೆ.
ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ 95.45, ಡೀಸೆಲ್ನ ಬೆಲೆ ಲೀಟರ್ಗೆ 86.35 ರೂ. ಬೆಂಗಳೂರಿನಲ್ಲಿ ಪೆಟ್ರೋಲ್ಗೆ ಲೀಟರ್ಗೆ 91.97 ರೂ., ಡೀಸೆಲ್ ಲೀಟರ್ಗೆ 84.12 ರೂ. ತಲುಪಿದೆ.
ಸತತ ಬೆಲೆ ಏರಿಕೆಯನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಟೀಕಿಸಿವೆ, ಸಾಮಾನ್ಯ ಜನರ ಮೇಲೆ ಹೊರೆ ಸರಾಗವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ತೆರಿಗೆಯನ್ನು ತಕ್ಷಣ ಕಡಿತಗೊಳಿಸಬೇಕೆಂದು ಒತ್ತಾಯಿಸಿದೆ. ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್ನ ಚಿಲ್ಲರೆ ಮಾರಾಟದ ಬೆಲೆಯ ಶೇಕಡಾ 61 ಕ್ಕಿಂತಲೂ ಹೆಚ್ಚು ಮತ್ತು ಡೀಸೆಲ್ನ ಶೇಕಡಾ 56 ರಷ್ಟನ್ನು ಹೊಂದಿವೆ. ಕೇಂದ್ರ ಸರ್ಕಾರ ಪೆಟ್ರೋಲ್ಗೆ ಪ್ರತಿ ಲೀಟರ್ ಅಬಕಾರಿ ಸುಂಕಕ್ಕೆ 32.9 ರೂ. ಮತ್ತು ಡೀಸೆಲ್ಗೆ 31.80 ರೂ.ವಿಧಿಸುತ್ತಿದೆ.