ಬಿಹಾರ(01-11-2020): ಬಿಜೆಪಿಯ ಜಾಹೀರಾತು ನೋಡಿ ಜನರು ಪ್ರತಿಕ್ರಿಯೆ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ನಿನ್ನೆಯಷ್ಟೇ ಕೇಂದ್ರ ಸರಕಾರ 2019ರಲ್ಲಿ 713 ಕೋಟಿ ರೂ. ಜಾಹೀರಾತಿಗೆ ಬಿಜೆಪಿ ಸರಕಾರ ವ್ಯಯಿಸಿದೆ ಎನ್ನುವುದು ಆರ್ ಟಿಐ ಮಾಹಿತಿಯಿಂದ ಬಹಿರಂಗವಾಗಿತ್ತು.
ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಭರಪೂರ ಭರವಸೆ ನಿಡುವ ಜಾಹೀರಾತನ್ನು ಮಾದ್ಯಮಗಳಲ್ಲಿ ಪ್ರಕಟಿಸಿದೆ. ಇದಕ್ಕೆ ಕೆಂಡಾಮಂಡಲಾರದ ಬಿಹಾರದ ಜನ ಬಿಜೆಪಿ ಇದ್ದರೆ ಎಲ್ಲವೂ ಇದೆ ಎಂದು ಹೇಳಿದ್ರಲ್ಲಾ ಏನಿದೆ? ಟ್ರಂಪ್ ಗೆ ಕೋಟ್ಯಾಂತರ ಖರ್ಚು ಮಾಡಿ ಕರೆಸಿ ಕೊನೆಗೆ ಟ್ರಂಪ್ ಇಂಡಿಯಾ ಗಲೀಜು ದೇಶ ಎಂದಿದ್ದಾರೆ. ಕೊರೊನಾ ವ್ಯಾಕ್ಸಿನ್ ಉಚಿತವಾಗಿ ನೀವು 10 ದಿನ ಕೊಡಬಹುದು. ಮತ್ತೆ ಬೇರೆ ರಾಜ್ಯಕ್ಕೆ ಚುನಾವಣೆ ಬಂದರೆ ಅಲ್ಲಿಗೆ ಕೊಡುತ್ತೀರಿ. 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ರಿ ಎಲ್ಲಿದೆ? ಯಾರ ಎಕೌಂಟ್ ಗೆ ಬಿದ್ದಿದೆ 15ಲಕ್ಷ? ನಮಗೆ ಉದ್ಯೋಗ ಕೊಡಿ ಎಂದು ಹೇಳುವ , ಬಿಜೆಪಿಗೆ ಛೀಮಾರಿ ಹಾಕುವ ವಿಡಿಯೋ ವೈರಲ್ ಆಗಿದೆ.
ವಿಡಿಯೋ ವೀಕ್ಷಿಸಿ….ಯೂಟ್ಯೂಬ್ ಗೆ ಸಬ್ ಸ್ಕ್ರೈಬ್ ಮಾಡಿ…