5ನೇ ತರಗತಿ ವಿದ್ಯಾರ್ಥಿನಿಯ ರೇಪ್| ಪ್ರಾಂಶುಪಾಲನಿಗೆ ಮರಣದಂಡನೆ, ಸಹಶಿಕ್ಷಕನಿಗೆ ಜೀವಾವಧಿ ಶಿಕ್ಷೆ

judgement
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(16-02-2021): 5 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾದ ಶಾಲೆಯೊಂದರ ಪ್ರಾಂಶುಪಾಲರಿಗೆ ಮರಣದಂಡನೆ ಶಿಕ್ಷೆ ಮತ್ತು ಮತ್ತೋರ್ವ ಶಿಕ್ಷಕನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

ಪಾಟ್ನಾ ವಿಶೇಷ ಕೋರ್ಟ್ ನ್ಯಾಯಾಧೀಶ ಅವಧೇಶ್ ಕುಮಾರ್ ಅವರು ಹೊರಡಿಸಿದ ಆದೇಶದಲ್ಲಿ, ಮುಖ್ಯ ಆರೋಪಿ ಅರವಿಂದ್ ಕುಮಾರ್ ಅವರಿಗೆ ಮರಣದಂಡನೆ ಶಿಕ್ಷೆ ಘೋಷಿಸಿದರು, ಜೊತೆಗೆ ಅವರಿಗೆ ಒಂದು ಲಕ್ಷ ದಂಡ ವಿಧಿಸಿದರು.

ಸಹ-ಆರೋಪಿ ಅಭಿಷೇಕ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು 50,000ರೂ. ದಂಡ ವಿಧಿಸಲಾಗಿದೆ. ಈ ಪ್ರಕರಣವು 2018 ರ ಸೆಪ್ಟೆಂಬರ್‌ನಲ್ಲಿ ವರದಿಯಾಗಿದ್ದು, ಸಂತ್ರಸ್ತೆ 11 ವರ್ಷ ವಯಸ್ಸಿನವಳಾಗಿದ್ದಾಳೆ, ಆಕೆಯ ಪೋಷಕರು ವೈದ್ಯರ ಬಳಿಗೆ ಕರೆದೊಯ್ಯಿದ ನಂತರ ಗರ್ಭಿಣಿಯಾಗಿದ್ದಾರೆಂದು ತಿಳಿದುಬಂದಿತ್ತು. ಬಳಿಕ ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಾಂಶುಪಾಲ ಮತ್ತು ಶಿಕ್ಷಕನ ಅಸಲಿಯತ್ತು ಬಹಿರಂಗವಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು