ತೆಹಲ್ಕಾ ಪತ್ರಕರ್ತ ತರುಣ್ ತೇಜ್ ಪಾಲ್ ಖಲಾಸೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಣಜಿ: ಪತ್ರಕರ್ತ, ತೆಹಲ್ಕಾ ನಿಯತಕಾಲಿಕದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ಅತ್ಯಾಚಾರ ಆರೋಪದಲ್ಲಿ ಖುಲಾಸೆಗೊಂಡಿದ್ದಾರೆ.

2013 ರಲ್ಲಿ ಉತ್ತರ ಗೋವಾದ ಪಂಚತಾರಾ ಹೋಟೆಲಿನಲ್ಲಿ ತೆಹಲ್ಕಾ ವತಿಯಿಂದ ಕಾರ್ಯಕ್ರಮವೊಂದು ನಡೆದಿತ್ತು. ಆ ವೇಳೆಯಲ್ಲಿ ತರುಣ್ ತನ್ನ ಮಹಿಳಾ ಸಹೋದ್ಯೋಗಿಯೊಬ್ಬರ ಮೇಲೆ ಲಿಫ್ಟ್ ನೊಳಗೆ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಪೋಲೀಸರು ತರುಣ್ ವಿರುದ್ಧ ಸುಮೊಟೋ ಸೇರಿದಂತೆ ಹಲವಾರು ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಇದೀಗ ಎಂಟು ವರ್ಷಗಳ ಬಳಿಕ, ಗೋವಾದ ಸೆಷನ್ಸ್ ನ್ಯಾಯಾಲಯವು ತರುಣ್ ಅವರು ನಿರ್ದೋಷಿ ಎಂದು ಹೇಳಿ ತೀರ್ಪು ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು