ಪತ್ರಕರ್ತ ಸಿದ್ದೀಖ್ ಕಪ್ಪ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕೆಂದು ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ | ಪತ್ರಕರ್ತನನ್ನು ಹಾಸಿಗೆ ಕಟ್ಟಿ ಹಾಕಲಾಗಿದ್ದು ಶೌಚಕ್ಕೂ ಅವಕಾಶವಿಲ್ಲವೆಂದು ಕುಟುಂಬಸ್ಥರ ಆರೋಪ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಉತ್ತರ ಪ್ರದೇಶದ ಪೋಲೀಸರಿಂದ ಬಂಧನಕ್ಕೊಳಗಾಗಿರುವ ಕೇರಳ ಮೂಲದ ಪತ್ರಕರ್ತನ ವಿಚಾರದಲ್ಲಿ ತುರ್ತಾಗಿ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಆತನ ವಕೀಲರು ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.

ಪತ್ರಕರ್ತ ಸಿದ್ಧೀಖ್ ಕಪ್ಪನ್ ಗೆ ಕೋವಿಡ್ ಬಾಧಿಸಿದ್ದು, ಸದ್ಯ ಮಥುರಾದ ಕೆಎಮ್ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಆತನನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತ್ತಿದ್ದು, ಸಂಕೋಲೆಗಳಿಂದ ಹಾಸಿಗೆಗೆ ಕಟ್ಟಿ ಹಾಕಲಾಗಿದೆ. ಶೌಚಾಲಯಕ್ಕೆ ಹೋಗಲೂ ಅನುಮತಿ ನೀಡುತ್ತಿಲ್ಲ ಎಂದು ಸಿದ್ದೀಖ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಆರೋಪವನ್ನು ಯುಪಿ ಪೋಲೀಸರು ನಿರಾಕರಿಸಿದ್ದು, ಆತನಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ. ಆದರೆ ಸಿದ್ಧೀಖ್ ಮನೆಗೆ ಕರೆ ಮಾಡಿದ ವೇಳೆ ಆತನ ದಾರುಣ ಸ್ಥಿತಿಯ ಬಗೆಗೆ ಹೇಳಿದ್ದಾನೆಂದು ಆತನ ಪತ್ನಿ ರೈಹಾನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಧುಮೇಹದಂತಹಾ ಗಂಭೀರ ಅನಾರೋಗ್ಯದಲ್ಲಿರುವ ಆತನನ್ನು ಈಗ ಇರುವ ಆಸ್ಪತ್ರೆಯಿಂದ ಬೇರೆ ಕಡೆಗೆ ವರ್ಗಾಯಿಸಿ, ಸೂಕ್ತವಾದ ಚಿಕಿತ್ಸೆಗೆ ಅವಕಾಶ ನೀಡಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

2020 ಅಕ್ಟೋಬರ್ ತಿಂಗಳಲ್ಲಿ ಹತ್ರಸಿನಲ್ಲಿ ನಡೆದ ದಲಿತ ಹೆಣ್ಣು ಮಗಳ ಅತ್ಯಾಚಾರ ಮತ್ತು ಕೊಲೆಯ ಬಳಿಕ, ಪತ್ರಕರ್ತ ಸಿದ್ದೀಖ್ ಸಂತ್ರಸ್ತೆಯ ಮನೆಗೆ ಭೇಟಿ ಕೊಡಲು ಹೋಗಿದ್ದರು. ವೇಳೆಯಲ್ಲಿ ಉತ್ತರ ಪ್ರದೇಶದ ಪೋಲೀಸರು ಆತನನ್ನು ಬಂಧಿಸಿದ್ದಲ್ಲದೇ ದೇಶದ್ರೋಹ, ಸಮುದಾಯಗಳೆಡೆಯಲ್ಲಿ ವೈರತ್ವ ಮೂಡಿಸಲು ಪ್ರಯತ್ನ, ಭಯೋತ್ಪಾದಕ ಚಟುವಟಿಕೆಗೆ ಹ ಸಂಗ್ರಹ ಮುಂತಾದ ಆರೋಪಗಳನ್ನು ಹೊರಿಸಿ, ಜೈಲಿಗೆ ತಳ್ಳಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು