ಪಶ್ಚಿಮ ಬಂಗಾಳಲ್ಲಿ ಕೇಂದ್ರ ಪಡೆಯಿಂದ ಹತ್ಯಾಕಾಂಡ : ಮಮತಾ ಬ್ಯಾನರ್ಜಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಅರೆಸೈನಿಕ ಪಡೆಯು ಹತ್ಯಾಕಾಂಡ ನಡೆಸಿದೆ. ಜನರನ್ನು ಕೊಲ್ಲುವ ಉದ್ದೇಶವನ್ನಿಟ್ಟುಕೊಂಡೇ ಅದು ಕಾರ್ಯಾಚರಿಸಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಜನರನ್ನು ನಿಯಂತ್ರಿಸಲು ತಿಳಿಯದ ಕೇಂದ್ರ ಅರೆಸೈನಿಕ ಪಡೆಯು ಕೂಚ್ ಬಿಹಾರಿನಲ್ಲಿ ಜನರನ್ನು ಕೊಂದು ಬಿಟ್ಟಿದೆ. ಜನರತ್ತ ಗುಂಡಿನ ಸುರಿಮಳೆಗೆರೆದಿದೆ.

ಜನರನ್ನು ನಿಯಂತ್ರಿಸುವ ಉದ್ದೇಶವಿದ್ದಿದ್ದರೆ ಅದು ಸೊಂಟಕ್ಕಿಂತ ಕೆಳಗೆ ಗುಂಡೆಸೆಯುತ್ತಿತ್ತು. ಆದರೆ ಸಾವಿಗೀಡಾದ ಎಲ್ಲರ ಕತ್ತು ಮತ್ತು ಎದೆಗಳಿಗೆ ಗುಂಡು ತಾಗಿದೆ ಎಂದು ಸಿಲಿಗುರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಮಮತಾ ಹೇಳಿದರು.

ಗೃಹ ಸಚಿವರಾದ ಅಮಿತ್ ಷಾ ಕೇಂದ್ರದ ಏಜೆನ್ಸಿಗಳನ್ನು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಸುವುದಕ್ಕಾಗಿ ಛೂಬಿಟ್ಟಿದ್ದಾರೆ. ಎಲ್ಲವೂ ನಾವು ಮೊದಲು ಭಯಪಟ್ಟಂತೆಯೇ ನಡೆದಿದೆ ಎಂದರು.

ಆದರೆ ಆತ್ಮರಕ್ಷಣೆಗಾಗಿ ಕೇಂದ್ರ ಅರೆಸೈನಿಕ ಪಡೆಯು ಗುಂಡು ಹಾರಿಸಬೇಕಾಗಿ ಬಂದಿದೆಯೆಂದು ಚುನಾವಣಾ ಆಯೋಗವು ನೇಮಿಸಿದ ತನಿಖಾಧಿಕಾರಿಯು ವರದಿ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು