ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಅಖಾಡದಲ್ಲಿ ರಾಜ್ಯದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರು ಪಕ್ಷ ತೊರೆದು ಬಿಜೆಪಿ ಸೇರುತ್ತಿರುವ ಪ್ರಕ್ರಿಯೆ ಇನ್ನೂ ಮುಂದುವರಿದಿದೆ.
ಇಂದು ಟಿಎಂಸಿ ಸರ್ಕಾರ ಸಚಿವ ಬಚ್ಚು ಹಾನ್ಸದಾ ಹಾಗೂ ಶಾಸಕ ಗೌರಿಶಂಕರ್ ದತ್ತ ಬಿಜೆಪಿಗೆ ಸೇರಿದ ಬೆನ್ನಿಗೆ ಬೆಂಗಾಲಿ ನಟ ಬೋನಿ ಸೇನ್ಗುಪ್ತ,ನಟಿ ರಾಜಶ್ರೀ ರಾಜಬನ್ಷಿ ಬಿಜೆಪಿ ಗೆ ಸೇರ್ಡಡೆಗೊಂಡಿದ್ದಾರೆ.
ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ನಂದಿಗ್ರಾಮ ವಿಧಾನಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಟಿಎಂಸಿಯ ಮಾಜಿ ಮುಖಂಡ ಸುವೇಂದ ಅಧಿಕಾರಿ ಬಿಜೆಪಿಯಿಂದ ಪ್ರತಿಸ್ಪರ್ಧಿಯಾಗಿದ್ದಾರೆ.
ದಿನ ಕಳೆದಂತೆ ಪ.ಬಂಗಾಳ ಚುನಾವಣೆಯಲ್ಲಿ ಕುತೂಹಲಕಾರಿ ಬೆಳವಣಿಗೆಯಾಗುತ್ತಿದೆ.