ಪಶ್ಚಿಮ ಬಂಗಾಳ ಚುನಾವಣೆ : ಮುಂದುವರಿದ ಹಿಂಸಾಚಾರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕಲ್ಕತ್ತಾ : ಇಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಬಂಕುರಾ,ಪುರುಲಿಯಾ,ಜಾರ್ಗಾಮ್,ಪೂರ್ವ ಮತ್ತು ಪಶ್ಚಿಮ ಮೆಡಿನಿಪುರದ ಐದು ಜಿಲ್ಲೆಗಳಲ್ಲಿ 30 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಒಟ್ಟು 191 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಅದೃಷ್ಟದ ಪರೀಕ್ಷೆ ಇಂದು ನಡೆಯಲಿಕ್ಕಿದೆ.

ಆದರೆ ಹಿಂಸಾಚಾರದ ಪ್ರಕರಣಗಳು ಇನ್ನೂ ಮುಂದುವರಿಯುತ್ತಿವೆ.
ಪುರುಲಿಯಾ ಜಿಲ್ಲೆಯಲ್ಲಿ ನಕ್ಸಲರು ಮತದಾನ ಸಿಬ್ಬಂದಿಯೊಬ್ಬರ ಮೇಲೆ ದಾಳಿಗೆ ಯತ್ನ ನಡೆಸಿದ್ದಾರೆ. ಹಾಗೆಯೇ ಅಧಿಕಾರಿಗಳ ವಾಹನಗಳಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದಾರೆ. ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ವೆಸ್ಟ್ ಮಿಡ್ನಾಪುರ ಪ್ರದೇಶದಲ್ಲಿ 45 ವರ್ಷದ ಲಾಲ್ ಮೋಹನ್ ಎಂಬ ಬಿಜೆಪಿ ಕಾರ್ಯಕರ್ತರೊಬ್ಬರ ಮೃತದೇಹವೊಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಂಕುರಾ ಜಿಲ್ಲೆಯಲ್ಲಿ ಸ್ಫೋಟವೊಂದು ನಡೆದಿದ್ದು, ಮೂವರು ಟಿ ಎಮ್ ಸಿ ಕಾರ್ಯಕರ್ತರು ಗಂಭೀರ ಗಾಯಗೊಂಡಿದ್ದಾರೆ. ಹಾಗೂ ಇದೇ ಜಿಲ್ಲೆಯ ಕುರುಕುಟಾಯ ಎಂಬಲ್ಲಿ ಟಿ ಎಮ್ ಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು