ಚಳಿಗಾಲದ ಅಧಿವೇಶನ ರದ್ದತಿಗೆ ಕೋವಿಡ್ ನೆಪ ಮಾತ್ರ| ಯಾಕೆ ಗೊತ್ತಾ?

parliment
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(20-12-2020): ಕೇಂದ್ರ ಸರಕಾರ ತಮ್ಮ ವೈಫಲ್ಯಗಳನ್ನು ಮರೆಮಾಚಲು ಚಳಿಗಾಲದ ಅಧಿವೇಶನವನ್ನೇ ರದ್ದು ಮಾಡಿದೆ ಎಂದು ಸಿಪಿಐಎಂ ಆರೋಪವನ್ನು ಮಾಡಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಕೇಂದ್ರವು ತನ್ನ ಸರ್ವಾಂಗೀಣ ವೈಫಲ್ಯಗಳನ್ನು ಮುಚ್ಚಿಹಾಕಲು ಬಳಸುತ್ತಿದೆ.ಕೋವಿಡ್ ಸಾಂಕ್ರಾಮಿಕದ ನೆಪವನ್ನು ಬಳಸಿಕೊಂಡು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಅಭೂತಪೂರ್ವವಾಗಿ ರದ್ದುಪಡಿಸುವುದನ್ನು ಸಿಪಿಐಎಂ ಪಾಲಿಟ್‌ಬ್ಯುರೊ ತೀವ್ರವಾಗಿ ಖಂಡಿಸಿದೆ. ಬಿಜೆಪಿಗೆ ತನ್ನ ಚುನಾವಣಾ ಪ್ರಚಾರ ಮತ್ತು ರ್ಯಾಲಿಗಳನ್ನು ಆಯೋಜಿಸಲು ಯಾವುದೇ ಸಮಸ್ಯೆಯಿಲ್ಲ ಆದರೆ ಅದು ಸಂಸತ್ತಿಗೆ ಉತ್ತರಿಸುವುದನ್ನು ತಪ್ಪಿಸಲು ಕೊರೊನಾ ಕಾರಣ ನೀಡಿ ಸದನವನ್ನು ರದ್ದುಪಡಿಸಿದೆ ಕೇಂದ್ರ ಸರಕಾರ ಸಾಂವಿಧಾನಿಕ ಜವಾಬ್ಧಾರಿಯನ್ನು ಮರೆತಿದೆ ಎಂದು ಸಿಪಿಐಎಂ ಹೇಳಿದೆ.

ಈ ಮೊದಲು ಕೇಂದ್ರ ಸರಕಾರ ಈ ಬಾರಿ ಚಳಿಗಾಲದ ಅಧಿವೇಶನ ಇರುವುದಿಲ್ಲ ಎಂದು ಹೇಳಿತ್ತು. ವಿಶೇಷ ಎಂದರೆ ಬಿಜೆಪಿ ಚುನಾವಣೆ ಇರುವ ರಾಜ್ಯಗಳಲ್ಲಿ ಲಕ್ಷಾಂತರ ಮಂದಿಯನ್ನು ಸೇರಿಸಿ ಚುನಾವಣಾ ಪ್ರಚಾರ ನಡೆಸುತ್ತಿದೆ. ಈ ವೇಳೆ ಕೋವಿಡ್ ಕುರಿತ ಎಲ್ಲಾ ನಿರ್ಬಂಧಗಳನ್ನು ಬ್ರೇಕ್ ಮಾಡಲಾಗುತ್ತಿದೆ. ಆದರೆ ಸಂಸತ್ತಿನ ಅಧಿವೇಶನಕ್ಕೆ ಮಾತ್ರ ಕೋವಿಡ್ ಕಾರಣ ನೀಡಿ ಎಸ್ಕೇಪ್ ಆಗುತ್ತಿರುವುದು ಅಚ್ಚರಿಯನ್ನು ಮೂಡಿಸುತ್ತಿದೆ.

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು