ಪರಮಾಣು ಶಕ್ತಿ ಕುರಿತು ಮಾಹಿತಿ ಹಂಚಿಕೊಂಡ ಭಾರತ ಮತ್ತು ಪಾಕಿಸ್ತಾನ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(1-1-2021): ಭಾರತ ಮತ್ತು ಪಾಕಿಸ್ತಾನಗಳು ಅಣು ಶಕ್ತಿ ಕುರಿತು ಮಾಹಿತಿ ಹಂಚಿಕೊಂಡಿವೆ. ಎರಡೂ ದೇಶಗಳನ್ನು ಅಣ್ವಸ್ತ್ರ ಬಳಕೆಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ಮಾಡಲಾದ ಒಪ್ಪಂದದ ಅನ್ವಯ ಕಳೆದ ಮೂವತ್ತು ವರ್ಷಗಳಿಂದಲೂ ಈ ಕ್ರಮವು ಜಾರಿಯಲ್ಲಿದೆ. ಈ ವರ್ಷವೂ ಅದನ್ನು ಮುಂದುವರಿಸಲಾಗಿದೆ.

1988 ರಲ್ಲಿ ಮಾಡಲಾದ ಈ ಒಪ್ಪಂದವು 1991 ರಲ್ಲಿ ಜಾರಿಗೆ ಬಂದಿತ್ತು. ಪ್ರತಿವರ್ಷ ಜನವರಿ ತಿಂಗಳಲ್ಲಿ ಈ ಮಾಹಿತಿ ಹಂಚಿಕೆಯು ಜರುಗುವುದು.

ದೆಹಲಿ ಮತ್ತು ಇಸ್ಲಾಮಾಬಾದುಗಳ ರಾಜತಾಂತ್ರಿಕ ವೇದಿಕೆಗಳ ಮುಖಾಂತರ ಪರಮಾಣು ರಿಯಾಕ್ಟರ್ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೆಯನ್ನು ಮಾಡಲಾಯಿತು. ಈ ವಿಚಾರವನ್ನು ವಿದೇಶಾಂಗ ಇಲಾಖೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಶ್ಮೀರ ವಿವಾದ, ಗಡಿ ತಕರಾರುಗಳು, ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುವ ಸಣ್ಣ ಪುಟ್ಟ ಸಂಘರ್ಷಗಳ ನಡುವೆಯೂ ಈ ಮಾಹಿತಿ ಹಂಚಿಕೆಯು ನಡೆದಿರುವುದು ಗಮನಾರ್ಹವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು