ಫೆಲೆಸ್ತೀನಿನ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್ | ಒಂಭತ್ತು ಮಕ್ಕಳ ಸಹಿತ ಇಪ್ಪತ್ತು ಬಲಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಗಾಝಾ: ಫೆಲೆಸ್ತೀನ್ ಭೂ ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್ ಸೇನೆಯು ಮಕ್ಕಳ ಸಹಿತ ಹಲವು ಫೆಲೆಸ್ತೀನಿಯರನ್ನು ಬಲಿ ಪಡೆದುಕೊಂಡಿದೆ.

ಒಂಭತ್ತು ಮಕ್ಕಳ ಸಹಿತ ಸುಮಾರು ಇಪ್ಪತ್ತು ಮಂದಿ ಫೆಲೆಸ್ತೀನಿಯರು ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅರುವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ.

ಇಸ್ರೇಲಿನಿತ್ತ ಫೆಲೆಸ್ತೀನಿನ ಹಮಸ್ ಹಲವು ಬಾರಿ ರಾಕೆಟ್ ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಹಮಸ್ ನೆಲೆಗಳ ಮೇಲೆ ವೈಮಾನಿಕ ದಾಳಿ ಆರಂಭಿಸಿರುವುದಾಗಿ ಇಸ್ರೇಲ್ ಸೈನ್ಯವು ಹೇಳಿಕೊಂಡಿದೆ. ದಾಳಿಯಲ್ಲಿ ಹಮಸಿನ ಸೇನಾ ಕಮಾಂಡರ್ ಓರ್ವರು ಮೃತಪಟ್ಟಿದ್ದಾರೆ.

ಹಮಸ್ ರಾಕೆಟ್ ದಾಳಿಗೂ ಮೊದಲು ಮುಸ್ಲಿಮರ ಮೂರನೇ ಪುಣ್ಯಸ್ಥಳವೆಂದು  ಗೌರವಿಸಲಾಗುತ್ತಿರುವ ಅಲ್ ಅಕ್ಸಾ ಮಸೀದಿಯ ಆವರಣದಲ್ಲಿ ಪ್ರಾರ್ಥನೆಯಲ್ಲಿ ನಿರತರಾದವರ ಮೇಲೆ ಇಸ್ರೇಲ್ ಪೋಲೀಸರು ದಾಳಿ ನಡೆಸಿದ್ದರು. ದಾಳಿಯ ವೇಳೆಯಲ್ಲಿ ರಬ್ಬರ್ ಗುಂಡು ಮತ್ತು ಅಶ್ರವಾಯುಗಳನ್ನು ಬಳಸಿ, ಇನ್ನೂರಕ್ಕೂ ಹೆಚ್ಚು ಫೆಲೆಸ್ತೀನಿಯನ್ನರನ್ನು ಗಾಯಗೊಳಿಸಿದ್ದರು.

ಪೂರ್ವ ಜೆರುಸೇಲೇಮನ್ನು ಸಂಪೂರ್ಣವಾಗಿ ಯಹೂದಿ ವಲಸಿಗರಿಗೆ ನೀಡಲು ಇಸ್ರೇಲ್ ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ಶೈಖ್ ಜರ್ರಾಹ್ಪ್ರದೇಶದಲ್ಲಿ ಯಹೂದಿ ವಲಸಿಗರನ್ನು ತಂದು ತುಂಬಿಸಲು ನೋಡುತ್ತಿದೆ. ‘ಶೈಖ್ ಜರ್ರಾಹ್ಎನ್ನುವುದು ಅಲ್ಅಖ್ಸಾ ಮಸೀದಿಗಿಂತ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿರುವ ಪ್ರದೇಶವಾಗಿದೆ.

ಇಸ್ರೇಲಿನ ಪ್ರಯತ್ನಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಎಲ್ಲಾ ಫೇಲೆಸ್ತೀನಿಯನ್ನರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಇಸ್ರೇಲಿನ ನೂತನ ಅತಿಕ್ರಮಣವೇ ಸಂಘರ್ಷಮಯ ವಾತಾವರಣವನ್ನು ಸೃಷ್ಠಿಯಾಗಲು ಮೂಲ ಕಾರಣವಾಗಿದೆ. ಇಸ್ರೇಲಿನ ನಡೆಗೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.

ಹಮಸಿನ ರಾಕೆಟ್ ದಾಳಿ ಮತ್ತು ಇಸ್ರೇಲಿನ ವಾಯುದಾಳಿ ಎರಡನ್ನೂ ನಿಲ್ಲಿಸಬೇಕೆಂದು ಅಮೇರಿಕಾ ಮತ್ತು ವಿಶ್ವಸಂಸ್ಥೆ ಎರಡೂ ಕಡೆಯವರೊಂದಿಗೆ ಕೇಳಿಕೊಂಡಿದೆ.

ಪರಮಾಧಿಕಾರವಿರುವ ದೇಶವೊಂದರ ರಾಜಧಾನಿಯಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಮಾಡುವುದು ರಾಜ್ಯದ ಸಹಜ ಹಕ್ಕಾಗಿದೆ. ಅದನ್ನು ನಾವು ಬಿಟ್ಟು ಕೊಡದೇ ಇನ್ನೂ ಮುಂದುವರಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಛೇರಿ ಪ್ರಕಟಣೆ ತಿಳಿಸಿದೆ. ಇದು ಸಂಘರ್ಷವು ಇನ್ನಷ್ಟು ಮುಂದುವರಿಯಲಿರುವುದರ ಲಕ್ಷಣವಾಗಿ ಕಂಡು ಬರುತ್ತಿದೆ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು