ಫೆಲೆಸ್ತೀನಿಯನ್ನರ ಹೋರಾಟವನ್ನು ಹಾಡಿ ಹೊಗಳಿದ ಗ್ರೀಕ್ ಆರ್ಚ್ ಬಿಷಪ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜೆರುಸಲೆಮ್: ಇಸ್ರೇಲ್ ವಿರುದ್ಧ ಫೆಲೆಸ್ತೀನಿಯನ್ನರ ಹೋರಾಟವನ್ನು ಗ್ರೀಕ್ ಆರ್ಥಡಾಕ್ಸ್ ಚರ್ಚಿನ ಆರ್ಚ್ ಬಿಷಪ್ ಹಾಡಿ ಹೊಗಳಿದ್ದಾರೆ.

ಅಲ್ ಅಖ್ಸಾದಲ್ಲಿ ಇಸ್ರೇಲಿಗೆ ಶರಣಾಗಲು ತಯಾರಿಲ್ಲದ ವೀರರನ್ನು ಕಂಡೆ. ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಮಾಡಲಾಗುತ್ತಿರುವ ಝಿಯೋನಿಸ್ಟ್ ಪಿತೂರಿಗಳ ವಿರುದ್ಧ ಅವರು ಹೋರಾಡುತ್ತಿದ್ದಾರೆ. ಇಸ್ರೇಲಿನ ವಸಾಹತುಷಾಹಿ ಧೋರಣೆ, ದಬ್ಬಾಳಿಕೆ ಮತ್ತು ಸರ್ವಾಧಿಕಾರದ ವಿರುದ್ಧ ಹೋರಾಡಿ, ಅವರು ಜನರನ್ನು ರಕ್ಷಿಸುತ್ತಿದ್ದಾರೆ ಎಂದು ಬಿಷಪ್ ಹೇಳಿದ್ದಾರೆ.

ಜೆರುಸಲೇಮಿನ ಗ್ರೀಕ್ ಆರ್ಥಡಾಕ್ಸ್ ಚರ್ಚಿನ ಆರ್ಚ್ ಬಿಷಪ್ ಆಗಿರುವ ಅಥೆಲ್ಲ ಹನ್ನಾ,  ಮೊದಲೂ ಇಸ್ರೇಲ್ ಆಕ್ರಮಣ ಮತ್ತು ವಸಾಹತು ಸ್ಥಾಪನೆಯ ವಿರುದ್ಧ ಧ್ವನಿಯೆತ್ತಿ, ಇಸ್ರೇಲಿನ ಕೆಂಗಣ್ಣಿಗೆ ಗುರಿಯಾಗಿದ್ದರು. ಅವರ ಹತ್ಯೆಗೆ ಸಂಚು ರೂಪಿಸಿದೆಯೆಂಬ ಆರೋಪವೂ ಇಸ್ರೇಲ್ ಮೇಲಿದೆ.

ಜೆರುಸಲೆಮನ್ನು ಸಂರಕ್ಷಿಸಲು ಮುಸ್ಲಿಮರು ಮತ್ತು ಕ್ರೈಸ್ತರು ಒಂದಾಗಬೇಕೆಂದು ಕರೆ ನೀಡಿದ ಆರ್ಚ್ ಬಿಷಪ್, ಹೋರಾಟದ ಮೂಲಕ, ಪವಿತ್ರ ನಗರದ ಇತಿಹಾಸ ಮತ್ತು ಪರಂಪರೆಯನ್ನು ತಾವು ಸಂರಕ್ಷಿಸುತ್ತೇವೆ ಎಂಬ ಸಂದೇಶವನ್ನು ಜೆರುಸಲೇಮ್ ನಿವಾಸಿಗಳು ವಿಶ್ವಕ್ಕೆ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಫೆಲೆಸ್ತೀನಿನ ಮೇಲೆ ಇಸ್ರೇಲ್ ಅತಿಕ್ರಮಣದ ವಿರುದ್ಧ ಧ್ವನಿಯೆತ್ತಬೇಕೆಂದು ಆಗ್ರಹಿಸಿ, ‘ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್ಗೆ ಮನವಿಯನ್ನೂ ಮಾಡಿಕೊಂಡಿದ್ದಾರೆ.

ಇಸ್ರೇಲ್ ಆಕ್ರಮಣದ ನಂತರ ಸುಮಾರು ಇಪ್ಪತ್ತೇಳು ಮಕ್ಕಳು ಮತ್ತು ಹಲವು ಮಹಿಳೆಯರೂ ಸೇರಿದಂತೆ ನೂರಕ್ಕೂ ಹೆಚ್ಚು ಫೆಲೆಸ್ತೀನಿಯನ್ನರು ಬಲಿಯಾಗಿದ್ದಾರೆ. ಐನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಫೆಲೆಸ್ತೀನಿನ ಮೇಲಿನ ವೈಮಾನಿಕ ದಾಳಿ ಇನ್ನೂ ಮುಂದುವರಿಯುತ್ತಿದೆ. ಪ್ರತಿಯಾಗಿ ನಡೆದ ಫೆಲೆಸ್ತೀನಿಯನ್ನರ ರಾಕೆಟ್ ದಾಳಿಗೆ ಇಸ್ರೇಲಿನಲ್ಲಿದ್ದ ಓರ್ವ ಭಾರತೀಯ ಮಹಿಳೆ ಮತ್ತು ಇತರ ಆರು ಇಸ್ರೇಲಿಗರು ಪ್ರಾಣ ಕಳೆದುಕೊಂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು