ಜೈಪುರ: ಭಾರತೀಯ ಸೇನೆಯ ಬಗೆಗಿನ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಏಜೆಂಟರಿಗೆ ರವಾನಿಸುತ್ತಿದ್ದ ಸೈನಿಕನೊಬ್ಬನನ್ನು ಬಂಧಿಸಲಾಗಿದೆ.
ಪಾಕಿಸ್ತಾನದ ಮಹಿಳಾ ಏಜೆಂಟು ನಕಲಿ ಫೇಸ್ಬುಕ್ ಖಾತೆಯ ಮೂಲಕ ಸೈನಿಕನ ಸಂಪರ್ಕ ಸಾಧಿಸಿದ್ದಲ್ಲದೇ, ಇಬ್ಬರೂ ನಿರಂತರ ಚಾಟಿಂಗುಗಳಲ್ಲಿ ಏರ್ಪಡುತ್ತಿದ್ದರು. ಹಾಗೂ ಸೈನ್ಯದ ಚಲನವಲನ, ಕಾರ್ಯಯೋಜನೆ ಮುಂತಾದುವುಗಳ ಬಗೆಗಿನ ಮಾಹಿತಿಗಳನ್ನ ಚಾಟಿಂಗ್ ಮೂಲಕವೇ ಆಕಾಶ್ ಮಹಿಳೆಗೆ ಒದಗಿಸುತ್ತಿದ್ದ ಎನ್ನಲಾಗಿದೆ.
ಇದೀಗ ರಜೆಯಲ್ಲಿ ಊರಿಗೆ ಬಂದ ಸೈನಿಕನನ್ನು ಪೋಲೀಸ್ ಗುಪ್ತಚರ ಅಧಿಕಾರಿಗಳು ಬಂಧಿಸಿದ್ದಾರೆ. 22 ವರ್ಷದ ಈತನು 2018ರಲ್ಲಿ ಸೈನ್ಯಕ್ಕೆ ಸೇರಿದ್ದ.