ಪದ್ಮಶ್ರೀ ಪ್ರಶಸ್ತಿ ವಿಜೇತ ಹಿಂದುಸ್ತಾನೀ ಸಂಗೀತ ಗುರುಗಳಿಂದ ಶಿಷ್ಯೆಯರಿಗೆ ಲೈಂಗಿಕ ಕಿರುಕುಳ | ಬಿಬಿಸಿ ತನಿಖಾ ವರದಿಯಿಂದಾಗಿ ವಿಶ್ವ ವಿಖ್ಯಾತ ಸಂಗೀತ ವಿದ್ಯಾಲಯದ ಕರಾಳ ಮುಖಗಳು ಬೆಳಕಿಗೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಭೋಪಾಲ್: ಇಲ್ಲಿನ ವಿಶ್ವ ವಿಖ್ಯಾತ ಸಂಗೀತ ವಿದ್ಯಾಲಯವಾದ ದ್ರುಪದ್ ಸಂಸ್ಥಾನ್ ಸಂಗೀತ ಶಾಲೆಯಲ್ಲಿ ಕ್ರೂರವಾದ ಲೈಂಗಿಕ ಕಿರುಕುಳ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಗುಂದೇಚ ಸಹೋದರರ ವಿರುದ್ಧ ಸಂಸ್ಥಾನ್ ಸಂಗೀತ ವಿದ್ಯಾಲಯದ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.

ಬಿಬಿಸಿ ತನಿಖಾ ವರದಿಯಂತೆ ಸಂಸ್ಥಾನದ ಗುರುಗಳಾದ ಉಮಾಕಾಂತ್, ಅಖಿಲೇಶ್ ಮತ್ತು 2019 ರಲ್ಲಿ ನಿಧನರಾದ ರಮಾಕಾಂತ್ ಗುಂದೇಚ ಇವರು ನಡೆಸುತ್ತಿದ್ದ ಗುರುಕುಲ ಮಾದರಿಯ ಸಂಗೀತ ಶಾಲೆಯಲ್ಲಿ ವಿದೇಶೀ ವಿದ್ಯಾರ್ಥಿಗಳೂ ಕಲಿಯುತ್ತಿದ್ದರು. 2020 ರಲ್ಲಿಮೀಟೂಅಲೆಯ ಸಮಯದಲ್ಲಿಯೇ ಸಂಗೀತ ವಿದ್ವಾಂಸರ ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ತನಿಖೆ ನಡೆಸಲು ಸಂಸ್ಥೆಯು ಸಮಿತಿಯನ್ನು ನೇಮಿಸಿತ್ತಾದರೂ, ಕೆಲ ಸಮಯದ ಬಳಿಕ ಆಪಾದಿತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಸಮಿತಿ ಮೂಲೆಗೆ ಸೇರಿತ್ತು.

ನಂತರದ ದಿನಗಳಲ್ಲಿ ಒಬ್ಬರ ನಂತರ ಒಬ್ಬರಂತೆ ವಿದ್ಯಾರ್ಥಿನಿಯರು ಸಂಸ್ಥೆಯ ವಿರುದ್ಧ ಆರೋಪ ಹೊರಿಸುತ್ತಲೇ ಇದ್ದರು. ಬಿಬಿಸಿ ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಅಲ್ಲಿ ಕಲಿತ ಕೆಲವು ವಿದ್ಯಾರ್ಥಿನಿಯರು ಕ್ಯಾಮರಾ ಮುಂದೆ ತಮಗಾದ ಅನ್ಯಾಯವನ್ನು ಹೇಳುವ ಧೈರ್ಯ ತೋರಿಸಿದ್ದಾರೆ.


2012
ರಲ್ಲಿ ರಮಾಕಾಂತ್, ಉಮಾಕಾಂತ್ ಸಹೋದರರಿಗೆ ಪದ್ಮಶ್ರೀ ಪ್ರಶಸ್ತಿ ದೊರೆಯಿತು. ಇದಲ್ಲದೇ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನೂ ಇವರು ಬಾಚಿಕೊಂಡಿದ್ದಾರೆ. ಪ್ರಾಚೀನ ಗುರುಕುಲ ಮಾದರಿಯ ಕ್ಯಾಂಪಸಿನಲ್ಲಿ ಹಿಂದುಸ್ತಾನೀ ಸಂಗೀತ ಕಲಿಯಲು ದೇಶವಿದೇಶಗಳಿಂದ ವಿದ್ಯಾರ್ಥಿನಿಯರು ಬರುತ್ತಿದ್ದರು. ಸಂಸ್ಥೆಯ ಆವರಣವನ್ನು ಶುಚಿಗೊಳಿಸುವುದು, ಬಟ್ಟೆ ಒಗೆಯುವುದು ಸೇರಿದಂತೆ ಕ್ಯಾಂಪಸಿನ ಎಲ್ಲಾ ಕೆಲಸಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸುತ್ತಿದ್ದರು ಎನ್ನಲಾಗಿದೆ.

ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಸಮಿತಿಯ ಮಾನ್ಯತೆ ಗಳಿಸಿದೆಯೆಂಬ ರೀತಿಯಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿತ್ತು. ಬಗ್ಗೆ ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಸಮಿತಿಯೊಂದಿಗೆ ವಿಚಾರಿಸಿದಾಗ ಸಂಸ್ಥೆಗೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿತ್ತು. ಅಲ್ಲದೇ ನಮ್ಮ ಹೆಸರನ್ನು ದುರುಪಯೋಗ ಮಾಡುವುದನ್ನು ನಿಲ್ಲಿಸಬೇಕೆಂದು ದ್ರುಪದ್ ಸಂಸ್ಥೆಯ ವಕ್ತಾರರೊಂದಿಗೆ ತಾಕೀತು ಮಾಡಿತ್ತು.

ಬಿಬಿಸಿ ಜೊತೆಗೆ ಮಾತನಾಡಿದ ಸಂತ್ರಸ್ತ ವಿದ್ಯಾರ್ಥಿನಿಯರು, ಸಂಸ್ಥೆಯೊಳಗೆ ತಮಗಾದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು, ಅಸಭ್ಯವಾಗಿ ಸ್ಪರ್ಶಿಸುವುದು, ನಗ್ನತೆಯನ್ನು ಪ್ರದರ್ಶಿಸುವುದು, ಲೈಂಗಿಕವಾಗಿ ಬಳಸಿಕೊಳ್ಳುವುದು, ಬಲಾತ್ಕಾರ ಮಾಡುವುದು ಮುಂತಾದ ಕಿರುಕುಳಗಳನ್ನು ಅಲ್ಲಿನ ಸಂಗೀತ ಗುರುಗಳು ನೀಡಿದ್ದಾರೆಂದು ಆರೋಪಿಸಿದ್ದಾರೆ.

ಈಗಾಗಲೇ ಮರಣ ಹೊಂದಿದ ರಮಾಕಾಂತ್ ತನಗೆ ವಿಪರೀತ ಕಿರುಕುಳ ನೀಡಿರುವುದನ್ನು ಯುವತಿಯೊಬ್ಬಳು ಬಹಿರಂಗಪಡಿಸಿದ್ದಾಳೆ. ಆಕೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಲ್ಲದೇ, ಕಾರಿನಲ್ಲಿ ಹೋಗುತ್ತಿರಬೇಕಾದರೆ, ದೇಹವನ್ನು ಸ್ಪರ್ಶಿಸಲು ತೊಡಗಿದ್ದ. ದಿಗಿಲುಗೊಂಡ ಯುವತಿ ಇದನ್ನು ವಿರೋಧಿಸಿದಾಗ ಆಕೆಯನ್ನು ಬಲವಂತವಾಗಿ ಚುಂಬಿಸಿ, ವಸ್ತ್ರವನ್ನು ಕಳಚಲು ಪ್ರಯತ್ನಿಸಿದ್ದ. ಪ್ರಯತ್ನ ವಿಫಲವಾದಾಗ ಹಾಸ್ಟೆಲಿಗೆ ಬಿಟ್ಟು ಬಂದಿದ್ದ ಎಂದು ಯುವತಿ ಹೇಳುತ್ತಾಳೆ.

ತನ್ನ ಕೋಣೆಗೆ ಬಂದು ಬಲವಂತವಾಗಿ ತನ್ನ ಬಟ್ಟೆಯನ್ನು ಕಳಚಿದ ರಮಾಕಾಂತ್ ಅತ್ಯಾಚಾರ ಮಾಡಿ ಹೊರಟು ಹೋಗಿದ್ದ. ಮರುದಿನವೇ ತಾನು ಸಂಸ್ಥೆಯನ್ನು ತ್ಯಜಿಸಿದ್ದೆ. ಮೂರು ದಿನಗಳ ವರೆಗೆ ಒಂದು ತೊಟ್ಟೂ ನೀರನ್ನೂ ಕುಡಿದಿರಲಿಲ್ಲ ಎಂದು ಮೋನಿಕಾ ಎಂಬ ವಿದ್ಯಾರ್ಥಿನಿಯ ಆರೋಪ. ಲೈಂಗಿಕವಾಗಿ ಹತ್ತಿರವಾದಂತೆ ಆತನಿಗೆ ಪಾಠ ಮಾಡುವಾಗ ಏಕಾಗ್ರತೆ ಇಲ್ಲವಾಗುತ್ತದೆ. ಆತನ ಬಯಕೆಯಂತೆ ನಡೆಯದಿದ್ದರೂ, ಎಲ್ಲರೆದುರು ಅವಮಾನ ಮಾಡುವುದು ಮೊದಲಾದ ರೂಪದಲ್ಲಿ ಸೇಡು ತೀರಿಸಿಕೊಳ್ಳುತ್ತಾನೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಇನ್ನೊಬ್ಬಳು ವಿದ್ಯಾರ್ಥಿನಿಯ ಅನುಭವದಂತೆ ಸಂಸ್ಥೆಗೆ ಸೇರಿದ ಮೊದಲ ದಿನವೇ ಅಲ್ಲಿನ ಡ್ರೈವರ್ ಲೈಂಗಿಕ ಕಿರುಕುಳ ನೀಡಿದ್ದ. ಬಗ್ಗೆ ರಮಾಕಾಂತ್ ಜೊತೆಗೆ ದೂರು ನೀಡಿದಾಗ, ಆತನೂ ಕಿರುಕುಳ ಕೊಡಲಾರಂಭಿಸಿದ.

ಪ್ರಾಚೀನ ಗುರುಕುಲ ಸಂಪ್ರದಾಯದಂತೆ ಗುರುವನ್ನು ಸಂಪೂರ್ಣವಾಗಿ ಅನುಸರಿಸುವುದು ಶಿಷ್ಯಂದಿರ ಕರ್ತವ್ಯವಾಗಿದೆ. ಶಿಷ್ಯಂದಿರಿಂದ ಸಂಪೂರ್ಣ ಸಮರ್ಪಣಾ ಭಾವವನ್ನು ಗುರು ನಿರೀಕ್ಷಿಸುತ್ತಾನೆ. ಇದನ್ನೇ ಆಧುನಿಕ ಕಾಲದಲ್ಲಿ ಶೋಷಣೆಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.” ಎಂದು ಖ್ಯಾತ ಹಿಂದುಸ್ತಾನೀ ಸಂಗೀತಗಾರ್ತಿ ನೀಲಾ ಭಗವತ್ ಹೇಳುತ್ತಾರೆ.  ಖ್ಯಾತ ಸಂಗೀತಕಾರ ಟಿ.ಎಮ್ ಕೃಷ್ಣ ಅವರು ಹೇಳುವಂತೆ ಗುರುಕುಲ ಸಂಪ್ರದಾಯವೇ ಇದಕ್ಕೆ ಮೂಲ ಕಾರಣವಾಗಿದ್ದು, ಗುರುಗಳಿಗೆ ಅಪರಿಮಿತ ಅಧಿಕಾರ ನೀಡುವ ಸಂಪ್ರದಾಯವನ್ನು ಕೊನೆಗಾಣಿಸಬೇಕಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು