ಕೋವಿಡ್ ತುರ್ತುಸ್ಥಿತಿ: ಆಕ್ಸಿಜನ್ ಕೊರತೆ ನೀಗಿಸಲು ‘ಆಕ್ಸಿಜನ್ ಎಕ್ಸ್ ಪ್ರೆಸ್’ ಆರಂಭಿಸಲಿರುವ ರೈಲ್ವೇ ಇಲಾಖೆ | ಹಾಸಿಗೆಗೆ ಪರ್ಯಾಯವಾಗಿ ರೈಲು ಕೋಚುಗಳ ಬಳಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ದೇಶದಲ್ಲಿ ಕೋವಿಡ್ ಮಹಾಮಾರಿಯು ತೀವ್ರತರವಾಗಿ ಉಲ್ಬಣಿಸುತ್ತಿರುವ ಸನ್ನಿವೇಶದಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ತುರ್ತು ನಿಗಾ ಘಟಕದಲ್ಲಿರುವ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಮತ್ತು ಹಾಸಿಗೆಗಳ ತೀವ್ರ ಕೊರತೆ ಕಾಡುತ್ತಿದೆ.

ಹಿನ್ನೆಲೆಯಲ್ಲಿ ರೋಗವು ವ್ಯಾಪಕವಾಗಿರುವ ಮಹಾರಾಷ್ಟದ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಅಲ್ಲಿನ ಸರಕಾರವು ‘ಆಕ್ಸಿಜನ್ ಎಕ್ಸ್ ಪ್ರೆಸ್ಆರಂಭಿಸಬೇಕೆಂದು ರೈಲ್ವೇ ಇಲಾಖೆಗೆ ವಿನಂತಿ ಮಾಡಿತ್ತು. ವಿನಂತಿಯನ್ನೀಗ ರೈಲ್ವೇ ಇಲಾಖೆಯು ಮನ್ನಿಸಿದೆ.

ಮಹಾರಾಷ್ಟ್ರದ ಬಳಿಕ ಮಧ್ಯಪ್ರದೇಶವೂ ಆಕ್ಸಿಜನ್ ಎಕ್ಸ್ ಪ್ರೆಸ್ಸಿಗಾಗಿ ಬೇಡಿಕೆ ಸಲ್ಲಿಸಿತ್ತು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಇನ್ನಿತರ ರಾಜ್ಯಗಳಲ್ಲೂ ಅಕ್ಸಿಜನ್ ಕೊರತೆಯು ತೀವ್ರಗೊಳ್ಳಬಹುದೆಂಬ ಆತಂಕವೂ ವ್ಯಕ್ತವಾಗುತ್ತಿದೆ. ಕ್ರಯೋಜನಿಕ್ ಟ್ಯಾಂಕರುಗಳಲ್ಲಿರುವ ದ್ರವೀಕೃತ ಆಕ್ಸಿಜನನ್ನೇ ಆಕ್ಸಿಜನ್ ಎಕ್ಸ್ ಪ್ರೆಸ್‍ಗಳೂ ರವಾನಿಸಲಿದೆ.

ಬರಿದಾಗಿರುವ ಸರಕು ಸಾಗಾಟ ರೈಲುಗಳು ನಾಳೆ ಮುಂಬೈ ಮತ್ತು ಸುತ್ತಮುತ್ತಲ ನಿಲ್ದಾಣಗಳಿಂದ ವಿಶಾಖ ಪಟ್ಟಣ, ಜೆಮ್‍ಶೆಡ್ ಪುರ ಮುಂತಾದ ಕಡೆಗಳಿಗೆ ಹೊರಡಲಿದೆ. ಅಲ್ಲಿಂದ ದ್ರವೀಕೃತ ಆಕ್ಸಿಜನ್ ಟ್ಯಾಂಕರುಗಳನ್ನು ಹೊತ್ತು ಮತ್ತೆ ಮಹಾರಾಷ್ಟಕ್ಕೆ ಹಿಂದಿರುಗಲಿದೆ.

ಆಸ್ಪತ್ರೆಗಳಲ್ಲಿ ಉಂಟಾದ ಹಾಸಿಗೆಗಳ ಕೊರತೆಯನ್ನು ನೀಗಿಸಲಿಕ್ಕಾಗಿ, ರೈಲು ಕೋಚುಗಳನ್ನು ಬಳಸಲೂ ಚಿಂತನೆ ನಡೆಸಲಾಗಿದ್ದು, ಪ್ರಕ್ರಿಯೆ ಚಾಲನೆಯಲ್ಲಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು