ಮಮತಾ ಆಡಳಿತದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ : ಅಸದುದ್ದೀನ್ ಉವೈಸಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೊಲ್ಕತ್ತಾ(17-11-2020) ಪಶ್ಚಿಮ ಬಂಗಾಳದ ಮುಸ್ಲಿಂ ಮತದಾರರನ್ನು ಮಮತಾ ಬ್ಯಾನರ್ಜಿ ಸರಕಾರವು ಕಡೆಗಣಿಸುತ್ತಿದೆ ಎಂದು ಎ‌ಐಎಮ್ಐಎಮ್ ನಾಯಕ ಅಸದುದ್ದೀನ್ ಉವೈಸಿ ಹೇಳಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಐದು ಸೀಟುಗಳನ್ನು ಗೆದ್ದ ಉವೈಸಿ ಪಕ್ಷವು ಇದೀಗ ಪಶ್ಚಿಮ ಬಂಗಾಳದ ಚುನಾವಣೆಯ ಮೇಲೆ ಕಣ್ಣಿಟ್ಟಿರುವುದರ ಸೂಚನೆ ಇದೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಮತಾ ಆಡಳಿತದಲ್ಲಿ ಮುಸ್ಲಿಮರನ್ನು ದೂರವಿಡಲಾಗುತ್ತಿದೆ. ಇದನ್ನು ಸಾಬೀತುಪಡಿಸುವ ಅಗತ್ಯ ದಾಖಲೆಗಳು ತನ್ನಲ್ಲಿದೆ. ಪಶ್ಚಿಮ ಬಂಗಾಳದ ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಉಳಿದ ರಾಜ್ಯಗಳ ಮುಸ್ಲಿಮರಿಗಿಂತಲೂ ದಯನೀಯವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹದಿನೆಂಟು ಸ್ಥಾನಗಳು ದೊರೆತಿದೆ. ಜಾತ್ಯತೀತವೆಂದು ಹೇಳಿಕೊಳ್ಳುವ ಪಕ್ಷಗಳು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಉವೈಸಿ ಹೇಳಿದರು.

ಹಲವು ಕಡೆಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಅವರು ಹೊಸ ರಾಜಕೀಯ ಶಕ್ತಿಯೊಂದರ ನಿರೀಕ್ಷೆಯಲ್ಲಿದ್ದಾರೆ‌. ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶಗಳನ್ನು ಒದಗಿಸಬೇಕಿದೆ. ಅಲ್ಲಿ ನಮಗೂ ಸಾಕಷ್ಟು ಅವಕಾಶಗಳಿದ್ದು, ಸ್ಥಳೀಯ ಸಂಘಟನೆಗಳೊಂದಿಗೆ ಚರ್ಚಿಸಿ, ಮುಂದಿನ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು