ಬೆಂಗಳೂರು(28-10-2020): ಇನ್ನು ಆಸ್ತಿ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ಮಾಡಲು ಸರಕಾರ ಕ್ರಮ ಕೈಗೊಂಡಿದೆ. ನವೆಂಬರ್ ಎರಡರಿಂದ ಇದು ಆರಂಭವಾಗಲಿದೆ.
ಮೊದಲು ಮೂರು ಉಪನೋಂದಾವಣಾ ಅಧಿಕಾರಿಯ ಕಛೇರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗುವುದು. ಅದು ಯಶಸ್ವಿಯಾದ ಪಕ್ಷದಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನೋಂದಣಿಗೆ ಬೇಕಾದ ದಾಖಲೆಯನ್ನು ಅಪ್ಲೋಡ್ ಮಾಡಿ, ತಗಲುವ ಶುಲ್ಕವನ್ನೂ ಆನ್ಲೈನ್ ಮೂಲಕವೇ ಪಾವತಿ ಮಾಡಬೇಕಾಗುತ್ತದೆ. ಎಲ್ಲಾ ದಾಖಲೆಗಳು ಸರಿಯಿದ್ದು, ಸ್ವೀಕೃತಗೊಂಡ ಮೇಲೆ ಆಸ್ತಿಯ ನೋಂದಣಿ ಮಾಡಿಕೊಳ್ಳಬೇಕು.
ಈ ಹಿಂದೆಯೂ ಆನ್ಲೈನ್ ನೋಂದಣಿಗೆ ಕ್ರಮ ಕೈಗೊಂಡಿದ್ದರೂ ಕೂಡಾ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈ ಬಾರಿ ಸರಕಾರವು ಇಚ್ಛಾಶಕ್ತಿನ್ನು ತೋರಿಸುತ್ತಿದೆ. ಇದು ಸಂಪೂರ್ಣವಾಗಿ ಯಶಸ್ವಿಯಾದರೆ, ಉಪನೋಂದಾವಣಾಧಿಕಾರಿ ಕಛೇರಿಗಳಲ್ಲಿ ಸರತಿ ಸಾಲು ತಪ್ಪಲಿದೆ ಮತ್ತು ಪ್ರಕ್ರಿಯೆಯು ಜನರಿಗೆ ಸರಳವಾಗಿ ಮಾರ್ಪಡಲಿದೆ