ಆನ್‌ಲೈನ್ ಸುದ್ದಿ ಪೋರ್ಟಲ್‌ ಗಳನ್ನು ಕಟ್ಟಿ ಹಾಕಲು ಮುಂದಾದ ಕೇಂದ್ರ ಸರಕಾರ!

online news
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(12-11-2020): ಆನ್‌ಲೈನ್ ಸುದ್ದಿ ಪೋರ್ಟಲ್‌ಗಳನ್ನು  ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ತರಲು ಕೇಂದ್ರವು ಆದೇಶ ಹೊರಡಿಸಿದೆ.

ನವೆಂಬರ್ 10 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಆನ್‌ಲೈನ್ ಸುದ್ದಿ ಪೂರೈಕೆದಾರರು, ಚಲನಚಿತ್ರಗಳು ಮತ್ತು ಆಡಿಯೋ-ದೃಶ್ಯ ಕಾರ್ಯಕ್ರಮಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಸುದ್ದಿ ಮತ್ತು ಪ್ರಸಕ್ತ ವ್ಯವಹಾರಗಳ ವಿಷಯವನ್ನು ಮಾಹಿತಿ & ಪ್ರಸಾರ ಸಚಿವಾಲಯದಡಿ ತರಬೇಕೆಂದು ಸೂಚಿಸಿದ್ದಾರೆ.

ಈ ವರ್ಷದ ಜುಲೈನಲ್ಲಿ, ಐ & ಬಿ ಸಚಿವಾಲಯವು ಸಮಾಜಿಕ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮ್ ಆಗುತ್ತಿರುವ ವಿಷಯವನ್ನು ತನ್ನ ವ್ಯಾಪ್ತಿಗೆ ತರಲು ಪ್ರಸ್ತಾಪಿಸಿತ್ತು. ಮಾಹಿತಿ ವರ್ಗಾವಣೆ ಕಾಯ್ದೆ 2000 ಕ್ಕೆ ಯಾವುದೇ ತಿದ್ದುಪಡಿಗಳ ಅಗತ್ಯವಿಲ್ಲದೇ (ಐ & ಬಿ) ಆನ್‌ಲೈನ್ ವಿಷಯವನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಅಧಿಕಾರ ವರ್ಗಾವಣೆಯ ಮಾರ್ಗಗಳನ್ನು ಗುರುತಿಸಲು ಅದು ಕೇಳಿತ್ತು.

ಪ್ರಸ್ತುತ ಡಿಜಿಟಲ್ ಕಂಟೆಂಟ್​ಗಳ ನಿಯಂತ್ರಣಕ್ಕೆ ಯಾವುದೇ ಕಾನೂನು ಅಥವಾ ಸ್ವಾಯತ್ತ ಸಂಸ್ಥೆಯಾಗಲಿ ಅಸ್ತಿತ್ವದಲ್ಲಿಲ್ಲವಾದ್ದರಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಭಾರತ ಸರ್ಕಾರದ ವ್ಯವಹಾರಿಕ ಹಂಚಿಕೆ ನಿಯಮಗಳು-1961ಕ್ಕೆ ತಿದ್ದುಪಡಿ ತರಲಾಗಿದ್ದು, ಇದಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿ ಹಾಕಿದ್ದಾರೆ.

ಈ ಅಧಿಸೂಚನೆಯ ಪ್ರಕಾರ ಇನ್ನು ಮುಂದೆ ಆನ್​ಲೈನ್ ವೇದಿಕೆಗಳ  ಸಿನಿಮಾ, ದೃಶ್ಯ-ಶ್ರಾವ್ಯ ವಿಚಾರಗಳು, ಸುದ್ದಿ ಮತ್ತು ಸಮಕಾಲೀನ ವಿಚಾರಗಳ ಮಾಹಿತಿಗಳು ಸಚಿವಾಲಯದ ವ್ಯಾಪ್ತಿಗೆ ಬರುತ್ತವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು