ನವದೆಹಲಿ(07-01-2021): ಹಸುಗಳ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಕಾಮಧೇನು ಆಯೋಗ (ಆರ್ಕೆಎ) ಫೆಬ್ರವರಿ 25 ರಂದು ‘ಗೋ ವಿಜ್ಞಾನ’ (ಹಸು ವಿಜ್ಞಾನ) ಕುರಿತು ರಾಷ್ಟ್ರವ್ಯಾಪಿ ಆನ್ಲೈನ್ ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
‘ಗೋ ವಿಜ್ಞಾನ’ ಪರೀಕ್ಷೆ ಉಚಿತವಾಗಿರುತ್ತದೆ. ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಸಚಿವಾಲಯ ಉಲ್ಲೇಖಿಸಿದೆ. ರಾಷ್ಟ್ರೀಯ ಕಾಮಧೇನು ಆಯೋಗದ ವೆಬ್ಸೈಟ್ನಲ್ಲಿ ಸೂಚಿಸಲಾಗುವ ಪಠ್ಯಕ್ರಮದ ಮೂಲಕ ಪರೀಕ್ಷೆ ನಡೆಯಲಿದೆ. ಹಸುಗಳ ಕುರಿತ ಇತರ ಸಾಹಿತ್ಯ ಮತ್ತು ಉಲ್ಲೇಖ ಪುಸ್ತಕಗಳನ್ನು ಓದಿಕೊಳ್ಳಬೇಕಿದೆ. ಬ್ಲಾಗ್ಗಳು, ವೀಡಿಯೊಗಳು ಮತ್ತು ಇತರ ಆಯ್ದ ಓದುವ ವಸ್ತುಗಳನ್ನು ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ವಿಜ್ಞಾನಿಗಳು, ಉದ್ಯಮಿಗಳು, ಗೋ ಸೇವಕರು, ರೈತರು, ಯುವಕರು ಮತ್ತು ಮಹಿಳೆಯರು ಮತ್ತು ಹಿರಿಯ ನಾಗರಿಕರು ಈ ಮೆಗಾ ಕಾರ್ಯಕ್ರಮವನ್ನು ಭರ್ಜರಿ ಯಶಸ್ಸಿಗೆ ತರಲು ಸಕ್ರಿಯವಾಗಿ ಕೆಲಸ ಮಾಡುತ್ತಾರೆ ಎಂದು ಸಚಿವಾಲಯ ತಿಳಿಸಿದೆ.
ಪರೀಕ್ಷೆ ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯಲಿದೆ. ‘ಕಾಮಧೇನು ಗೋ ವಿಜ್ಞಾನ ಪ್ರಚಾರ್ ಪ್ರಸಾರ್ ಪರೀಕ್ಷೆಯು ಹಿಂದಿ, ಇಂಗ್ಲಿಷ್ ಮತ್ತು 12 ಪ್ರಾದೇಶಿಕ ಭಾಷೆಗಳಲ್ಲಿ 100 ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುವ ಆನ್ಲೈನ್ ಪರೀಕ್ಷೆಯಾಗಲಿದೆ. ಪರೀಕ್ಷೆಯ ಅವಧಿ ಒಂದು ಗಂಟೆಯಾಗಿದೆ.