ಬೆಂಗಳೂರು(16-10-2020): ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಕೆಜಿಗೆ 75 ರೂ.ವರೆಗೆ ತಲುಪಿದೆ.
ಬೆಂಗಳೂರಿನ ಮಾರುಕಟ್ಟೆ, ಬೀದಿ ವ್ಯಾಪಾರಿಗಳ ಬಳಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 75 ರೂ. ಇದೆ. ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ಮತ್ತು ಅತಿವೃಷ್ಟಿಯಿಂದ ಬೆಳೆ ನೆಲಕಚ್ಚಿದ ಪರಿಣಾಮ ಈರುಳ್ಳಿ ದರ ಹೆಚ್ಚಾಗತೊಡಗಿದೆ ಎಂದು ಹೇಳಲಾಗಿದೆ.
ಕಳೆದ ಬಾರಿ ಈರುಳ್ಳಿ ದರ ಕೆಜಿಗೆ 200 ರೂ. ಸಮೀಪಕ್ಕೆ ತಲುಪಿತ್ತು. ಈಗ ಮಳೆಯ ಪರಿಣಾಮ ಹಸಿ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಆದರೆ ಇದು ಬೇಗನೆ ಕೊಳೆಯುವ ಕಾರಣ ದಾಸ್ತಾನು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸರಿಯಾದ ನಿರ್ವಹಣೆ ಇಲ್ಲದೆ ಬೆಲೆ ಹೆಚ್ಚಳವಾಗಿದೆ ಎನ್ನಲಾಗಿದೆ.